ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವೆಸ್ಟ್ ಇಂಡೀಸ್ ಟೂರ್ನಿಂದ ದೂರ ಉಳಿದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿರುವುದು ಎಲ್ರಿಗೂ ಗೊತ್ತೇ ಇದೆ.
ಇಂಡಿಯನ್ ಟೆರಿಟೊರಿಯಲ್ ಆರ್ಮಿ 106 ಬೆಟಾಲಿಯನ್ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಧೋನಿ ಎರಡು ವಾರಗಳ ಕಾಲ ಸೇವೆ ಸಲ್ಲಿಸಿದ್ರು. ಸೇನೆಯಲ್ಲಿ ಸೇವಾ ನಿರತರಾಗಿದ್ದ ಧೋನಿ ಸೈನಿಕರೊಂದಿಗೆ ವಾಲಿಬಾಲ್ ಆಡಿದ್ದು, ಹಾಡು ಹೇಳಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಅವರು ಮಕ್ಕಳ ಜೊತೆ ಕ್ರಿಕೆಟ್ ಆಡಿದ್ದು. ಆ ಫೋಟೋ ಈಗ ವೈರಲ್ ಆಗಿದೆ. ಆಗಸ್ಟ್ 14ರಂದು ಧೋನಿ ಲಡಾಕ್ ಸೇನಾ ಬೇಸ್ ಮತ್ತು ಮಿಲಟರಿ ಆಸ್ಪತ್ರೆಗೆ ಭೇಟಿ ನೀಡಿದ್ರು. ಈ ವೇಳೆ ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಲೇಹ್ ಮಕ್ಕಳ ಜೊತೆ ಮಾಹಿ ಕ್ರಿಕೆಟ್ ಆಡಿದ್ದರು. ಈ ಫೋಟೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಗಡಿ ಕಾಯುವ ಜೊತೆಗೆ ಅಲ್ಲಿ ಕ್ರಿಕೆಟ್ ಕೂಡ ಆಡಿದ್ರು ಧೋನಿ..!
TRENDING ARTICLES