Sunday, December 29, 2024

ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ಒಂದೇ ಕುಟುಂಬದ ಐವರು ಆತ್ಮಹತ್ಯೆ..!

ಮೈಸೂರು : ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಲ್ಲಿ ನಡೆದಿದೆ. ಓಂ ಪ್ರಕಾಶ್, ಅವರ ತಂದೆ- ತಾಯಿ, ಗರ್ಭಿಣಿ ಹೆಂಡತಿ ಹಾಗೂ ನಾಲ್ಕು ವರ್ಷದ ಮಗು ಮೃತ ದುರ್ದೈವಿಗಳು.
ಓಂ ಪ್ರಕಾಶ್ ಅನಿಮೇಷನ್​​ ಸಿನಿಮಾ ಮಾಡ್ಬೇಕು ಅಂತ ಕನಸು ಕಂಡಿದ್ದರು. ತಮಿಳಿನ ಅನಿಮೇಷನ್​ ಸಿನಿಮಾ ‘ಕೊಚ್ಚಾಡಿಯನ್’ ರೀತಿಯಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದರು. ಸಿನಿಮಾಕ್ಕಾಗಿ 60 ಲಕ್ಷ ರೂ ಬಂಡವಾಳವನ್ನು ಹಾಕಿದ್ದರು. ಆದರೆ, ಕಲಾವಿದರು, ತಂತ್ರಜ್ಞರು ಕೈ ಕೊಟ್ಟಿದ್ದರಿಂದ ಸಿನಿಮಾ ಅರ್ಧಕ್ಕೇ ನಿಂತು ಹೋಯ್ತು. ಒಂದು ಕಡೆ ಸಿನಿಮಾ ನಿಂತೋದ ನೋವು, ಇನ್ನೊಂದ್​ ಕಡೆ ಸಾಲಗಾರರ ಕಾಟ ಸಹಿಸಿಕೊಳ್ಳಲಾಗದೆ ಓಂ ಪ್ರಕಾಶ್ ಗರ್ಭಿಣಿ ಹೆಂಡತಿ, ನಾಲ್ಕು ವರ್ಷದ ಮಗ, ತಂದೆ ಹಾಗೂ ತಾಯಿಗೆ ಶೂಟ್​ ಮಾಡಿ ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES