Sunday, November 24, 2024

ಪುನೀತ್​ ರಾಜ್​ಕುಮಾರ್​​​ರಿಂದ ಪ್ರವಾಹ ಸಂತ್ರಸ್ತರಿಗೆ ಧನಸಹಾಯ

ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗಾಗಿ ಸ್ಯಾಂಡಲ್​ವುಡ್​ ಸ್ಟಾರ್​​​ ನಟ ‘ರಾಜಕುಮಾರ’ ಪುನೀತ್​​ ರಾಜ್​ಕುಮಾರ್​ರವರ ಮನ ಮಿಡಿದಿದೆ. ಅವರು ಇಂದು 5 ಲಕ್ಷ ರೂ.ಗಳನ್ನು ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದಾರೆ.

ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಭೀಕರ ಪ್ರವಾಹದಿಂದಾಗಿ ಜನಜೀವನ ತತ್ತರಿಸಿದ್ದಾರೆ. ಜನರು ಮನೆಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ರಾಜ್ಯದ ಜನ್ರು ನೆರವಾಗುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಕಲಾವಿದರುಗಳು ಕೂಡ ಸಂತ್ರಸ್ತರಿಗೆ ನೆರವಾಗುವಂತೆ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರಲ್ಲದೇ, ಸ್ವತಃ ಅವರೇ ಮುಂದೆ ಬಂದು ದೇಣಿಗೆಗಳನ್ನು ನೀಡಿದ್ದಾರೆ. ಇದೀಗ ಸ್ಯಾಂಡಲ್​ವುಡ್​ ‘ಯುವರತ್ನ’ ಪುನೀತ್​ ರಾಜ್​ಕುಮಾರ್​​ ಕೂಡ ನೆರೆ ಸಂತ್ರಸ್ತರಿಗಾಗಿ ಧನಸಹಾಯವನ್ನು ಮಾಡಿದ್ದಾರೆ. ಅವರು ಇಂದು ಸಿಎಂ ಬಿಯಸ್​ವೈ ಅವರನ್ನು ಭೇಟಿಯಾಗಿ 5 ಲಕ್ಷ ರೂ.ಗಳನ್ನು ದೇಣಿಗೆ ನೀಡಿ ಔದರ್ಯ ಮೆರೆದಿದ್ದಾರೆ.

ಬಳಿಕ ಮಾತಾಡಿದ ಪವರ್​​ಸ್ಟಾರ್​​ ಪುನೀತ್​ ರಾಜ್​ಕುಮಾರ್​​​ ಅವ್ರು, ನಾವೆಲ್ಲಾ ನಮ್ಮ‌ ಕೈಲಾದ ಸಹಾಯವನ್ನ ಮಾಡುತ್ತೇವೆ. ಇನ್ನಷ್ಟು ಆರ್ಥಿಕ ನೆರವು ಕೊಡುವ ಯೋಜನೆ ಇದೆ. ಕೆಲವು ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

 

 

 

 

RELATED ARTICLES

Related Articles

TRENDING ARTICLES