ಜಮೈಕಾ: ಪ್ರವಾಸಿ ಭಾರತ ತಂಡ ಹಾಗೂ ಆತಿಥೇಯ ವೆಸ್ಟ್ ವಿಂಡೀಸ್ ನಡುವೆ ಆಗಸ್ಟ್ 22ರಿಂದ ಟೆಸ್ಟ್ ಸರಣಿ ಶುರುವಾಗಲಿದೆ. ಈಗಾಗಲೇ ಟಿ-20 ಹಾಗೂ ಏಕದಿನ ಸರಣಿಯನ್ನು ಕೊಹ್ಲಿ ಪಡೆ ವಶಪಡಿಸಿಕೊಂಡಿದ್ದು, ಟೆಸ್ಟ್ ಪಂದ್ಯದ ಮೇಲೂ ಕಣ್ಣಿಟ್ಟಿರುವ ಟೀಮ್ ಇಂಡಿಯಾಗೆ ಹೊಸ ಚಿಂತೆ ಆರಂಭವಾಗಿದೆ. ಅದಕ್ಕೆ ಕಾರಣ ತಂಡದ ಬ್ಯಾಟಿಂಗ್ ಬೆನ್ನೆಲುಬು, ಕ್ಯಾಪ್ಟನ್ ಕೊಹ್ಲಿ ಗಾಯಳಾಗಿರೋದು.
ನಿನ್ನೆ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರನ್ ಮೆಶಿನ್ ವಿರಾಟ್ ಕೊಹ್ಲಿ ತನ್ನ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 27ನೇ ಓವರನಲ್ಲಿ ವಿಂಡೀಸ್ನ ಕೆಮರ್ ರೋಚ್ ಎಸೆದ ಎಸೆತವೊಂದು ನೇರವಾಗಿ ವಿರಾಟ್ ಅವರ ಕೈ ಬೆರಳಿಗೆ ಬಡಿಯಿತು.ಇದ್ರಿಂದ ತೀವ್ರ ನೋವು ಅನುಭವಿಸಿದ ಕೊಹ್ಲಿ ಅವರಿಗೆ ಫಿಜಿಯೋ ಪ್ರಥಮ ಚಿಕಿತ್ಸೆ ಕೊಡಿಸಿದ್ರು. ಮತ್ತೆ ಬ್ಯಾಟಿಂಗ್ ಮಾಡಿದ ಕೊಹ್ಲಿ ನೋವಿನ ನಡುವೆಯೂ ಶತಕ ಬಾರಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ರು.
ಇನ್ನು ಒಂದು ವಾರದ ನಂತರ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡ್ತಾರೋ ಇಲ್ಲವೋ ಅನ್ನೋದೆ ಅನುಮಾನವಾಗಿದೆ.ಗಾಯದ ಪ್ರಮಾಣ ಇನ್ನು ತಿಳಿಯದಿರುವುದರಿಂದ ಸ್ಕಾನಿಂಗ್ ವರದಿ ಬಂದ ಬಳಿಕ ಈ ಬಗ್ಗೆ ಖಚಿತವಾಗಲಿದೆ.