Thursday, November 21, 2024

ಧೋನಿಯಿಂದ ಲಡಾಖ್​​ನಲ್ಲಿ ಧ್ವಜಾರೋಹಣ

ಲಡಾಖ್: ವೆಸ್ಟ್​​​ ಇಂಡೀಸ್​​​ ಪ್ರವಾಸದಿಂದ ಹಿಂದೆ ಸರಿದಿರುವ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​​​ ಮಹೇಂದ್ರ ಸಿಂಗ್​​ ಧೋನಿ ಸದ್ಯ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಇನ್ನು ಸೇನೆಯ ಲೆಫ್ಟಿನೆಂಟ್​ ಕರ್ನಲ್​ ಆಗಿರುವ ಧೋನಿಯವರು ಇಂದು 73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಡಾಖ್​ನ ಲೇಹ್​ನಲ್ಲಿ ಧ್ವಜಾರೋಹಣ ಮಾಡಿದ್ದಾರೆ.

2011ರ ವಿಶ್ವಕಪ್​​ ವಿಜೇತ ತಂಡದ ನಾಯಕರಾಗಿದ್ದ ಧೋನಿಯವರನ್ನು ಭಾರತೀಯ ಸೇನೆ ಲೆಫ್ಟಿನೆಂಟ್​ ಕರ್ನಲ್​ ಸ್ಥಾನ ನೀಡಿ ಗೌರವಿಸಿತ್ತು. 2019ರ ವಿಶ್ವಕಪ್​ ನಂತರದ ವೆಸ್ಟ್​​ ಇಂಡೀಸ್​​ ಸರಣಿಯಿಂದ ವಿಶ್ರಾಂತಿ ಬಯಸಿದ ಧೋನಿಯವರು ಜುಲೈ 31ರಂದು 106 ಟಿಎ ಬೆಟಾಲಿಯನ್​​ ಜೊತೆ ಸೇರಿ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಧೋನಿಯವರು ಸಿಯಾಚಿನ್​​​ಗೆ ತೆರಳಲಿದ್ದು ಆ ಬಳಿಕ ಧೋನಿಯವರ ಸೇವೆ ಅಂತ್ಯಗೊಳ್ಳಲಿದೆ. ಕೆಲದಿನಗಳ ಹಿಂದಷ್ಟೇ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟಿರುವ ಲಡಾಖ್​​​ನ ಲೇಹ್​​​ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಧೋನಿ ಆರ್ಮಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.

 

RELATED ARTICLES

Related Articles

TRENDING ARTICLES