Sunday, December 29, 2024

ದುಬಾರಿ ಕಾರಿನಲ್ಲಿ ಬಂದ ಅನರ್ಹ ಶಾಸಕ MTB ನಾಗರಾಜ್​; ಕರ್ನಾಟಕದಲ್ಲಿ ಇವರ ಜೊತೆ ಮಾತ್ರ ಇರೋದಂತೆ ಈ ಕಾರು!

ಬೆಂಗಳೂರು: ಹೊಸಕೋಟೆಯ ಅನರ್ಹ ಶಾಸಕ MTB ನಾಗರಾಜ್​​​ರವರು ದುಬಾರಿ ಬೆಲೆಯ ರೋಲ್ಸ್​​ ರಾಯ್ಸ್ ಕಾರು ಖರೀದಿ ಮಾಡಿದ್ದಾರೆ. ಇಂದು ಸಿಎಂ ಕಚೇರಿಗೆ ಅದೇ ಕಾರಿನಲ್ಲಿ ಬಂದ ಅವರು ಎಲ್ಲರ ಆಕರ್ಷಣೆಗೆ ಗುರಿಯಾದ್ರು.

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ರಾಜೀನಾಮೆ ನೀಡಿದ್ದ MTB ನಾಗರಾಜ್​ರವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ರು. ಆರಂಭದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರವರ ಆಪ್ತರಾಗಿದ್ದ ಅವರು ಬಳಿಕ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡ್ರು. ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್​​​​​​ನ ಯಾವೂದೇ ನಾಯಕರ ಮನವೊಲಿಕೆಗೂ ಬಗ್ಗದ MTB ನಾಗರಾಜ್​ ಅವ್ರು ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ರು. ಕಳೆದ ವಿಧಾನಸಭಾ ಎಲೆಕ್ಷನ್​​ ವೇಳೆ ತಮ್ಮ ಆಸ್ತಿ ಘೋಷಿಸಿಕೊಂಡಿದ್ದ ನಾಗರಾಜ್​ ಅವರು ದೇಶದಲ್ಲಿಯೇ ಅತೀ ಶ್ರೀಮಂತ ಶಾಸಕರಾಗಿ ಗುರುತಿಸಿಕೊಂಡಿದ್ರು. ಹಲವಾರು ಐಷಾರಾಮಿ ವಾಹನಗಳನ್ನು ಅವರು ಹೊಂದಿದ್ದು ಇದೀಗ ಮತ್ತೊಂದು ಕಾರನ್ನು ಖರೀದಿಸಿದ್ದಾರೆ.

ಲಂಡನ್​ನಿಂದ 12 ಕೋ.ರೂಗಳನ್ನು ನೀಡಿ ​​ ಕಾರು ಖರೀದಿಸಿರುವ MTB ನಾಗರಾಜ್​​ ಅವರು ಒಂದು ವರ್ಷದ ಹಿಂದೆಯೇ ಈ ಕಾರನ್ನು ಆರ್ಡರ್​​ ಮಾಡಿದ್ರಂತೆ. KA 59 N 888 ನೋಂದಣಿ ಸಂಖ್ಯೆಯ ಈ ಕಾರನ್ನು ವೈಟ್​​ ಪೆಟ್ರೋಲ್​ನಿಂದ ಓಡಿಸಲಾಗುತ್ತೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ MTB ನಾಗರಾಜ್​ ಅವರು, ಇದು ನನ್ನ ಕನಸಿನ ಕಾರು. ಕರ್ನಾಟಕದಲ್ಲಿ ನನ್ನ ಬಳಿ ಮಾತ್ರ ಈ ಕಾರು ಇರೋದು. ತುಂಬಾ ವರ್ಷಗಳಿಂದ ಇದನ್ನ ತಗೋಬೇಕು ಅಂತಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES