ಟ್ರಿನಿಡಾಡ್: ಪ್ರವಾಸಿ ಭಾರತ ವಿರುದ್ಧ ನಿನ್ನೆ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ಕ್ರಿಸ್ ಗೇಲ್ ಮಹತ್ತರವಾದ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ಲೆಜೆಂಡ್ ಆಟಗಾರ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರ್ದಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ 11 ರನ್ ಗಳಿಸಿದ ಗೇಲ್, ವೆಸ್ಟ್ ಇಂಡೀಸ್ ಪರ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿತ್ತು. ಇದೀಗ ಕ್ರಿಸ್ ಗೇಲ್ 10353 ರನ್ಗಳಿಸುವ ಮೂಲಕ ಅವರ ದಾಖಲೆಯನ್ನು ಅಳಿಸಿದ್ದಾರೆ.
ಇನ್ನು ಗೇಲ್ ಈವರೆಗೆ ಒಟ್ಟು 297 ಪಂದ್ಯಗಳನ್ನಾಡಿದ್ದು ವೆಸ್ಟ್ ಇಂಡೀಸ್ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ಅಟಗಾರನೆನಿಸಿಕೊಂಡಿದ್ದಾರೆ. ಜೊತೆಗೆ 25 ಶತಕಗಳನ್ನು ಸಿಡಿಸಿರುವ ಗೇಲ್, ಅತಿ ಹೆಚ್ಚು ಶತಕ ಸಿಡಿಸಿರುವ ವಿಂಡೀಸ್ನ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.