Thursday, December 26, 2024

ಭಾರತ ವಿರುದ್ಧ ಟೆಸ್ಟ್​​ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್​​ನ ರಹಕೀಮ್ ಕಾರ್ನ್​​​ವಾಲ್​​​​ರವರ ವಿಶೇಷತೆ ಗೊತ್ತಾ?

ಸೈಂಟ್​​​ ಜಾನ್ಸ್​​​: ಪ್ರವಾಸಿ ಭಾರತ ವಿರುದ್ಧದ  ಟೆಸ್ಟ್  ಸರಣಿಗಾಗಿ 13 ಆಟಗಾರರನ್ನೊಳಗೊಂಡ ವೆಸ್ಟ್​​ ಇಂಡೀಸ್​ ತಂಡವನ್ನು ಪ್ರಕಟಿಸಲಾಗಿದೆ. ವಿಶೇಷವೆಂದರೇ  ಈ ಹಿಂದೆ  ಭಾರತ ವಿರುದ್ಧ ಟೆಸ್ಟ್​​ ಸರಣಿಯ ನಂತರ ನಿವೃತ್ತಿಯಾಗುವ ಬಯಕೆ ವ್ಯಕ್ತಪಡಿಸಿದ್ದ ಸ್ಫೋಟಕ ಆಟಗಾರ ಕ್ರಿಸ್​​ಗೇಲ್​​ಗೆ ಟೆಸ್ಟ್​​​ ತಂಡದಿಂದ ಕೋಕ್​​ ನೀಡಲಾಗಿದ್ದು,  ಆಯ್ಕೆ ಸಮಿತಿಯು ಆಫ್​ ಸ್ಪಿನ್ನರ್ ರಹಕೀಮ್ ಕಾರ್ನ್ ವಾಲ್​​ರವರನ್ನು ಹೊಸದಾಗಿ ಸೇರಿಸಿಕೊಂಡಿದೆ.

   ಇನ್ನು ರಹಕೀಮ್ ಕಾರ್ನ್ ವಾಲ್​​​ರವರು ಅಂತಿಂಥ ಆಟಗಾರನಲ್ಲ. ಇವ್ರ ವಿಶೇಷತೆಯನ್ನು ಕೇಳಿದ್ರೆ ಯಾರಾದ್ರೂ ಒಂದು ಕ್ಷಣ ದಂಗಾಗ್ತರೆ. ಅಂಥದೇನಪ್ಪ ಇವ್ರಲ್ಲಿದೆ ಅಂತಿರಾ ಈ ಸ್ಟೋರಿ ಓದಿ..

  ಮೂಲತಃ ಆಂಟಿಗುವಾದ ಆಟಗಾರನಾಗಿರುವ ರಹಕೀಮ್ ಕಾರ್ನ್ ವಾಲ್​​​ರವರಿಗೆ ಸದ್ಯ 26 ವರ್ಷ ಪ್ರಾಯ. ಇತರ ಕ್ರಿಕೆಟ್​​ ಆಟಗಾರರು ತಮ್ಮ ಫಿಟ್ನೆಸ್​, ದೇಹತೂಕಕ್ಕೆ ಗಮನಕೊಟ್ರೆ ಇವ್ರು ಇದಕ್ಕೆ ತದ್ವಿರುದ್ಧ. ಹೀಗಾಗಿ ಅವ್ರ ದೇಹ ತೂಕ ಬರೊಬ್ಬರಿ 140 ಕೆ.ಜಿ. ಇದೇ ಇವರಲ್ಲಿನ ವಿಶೇಷ. ಅಷ್ಟೇ ಅಲ್ಲ,ಇವರು 6.6 ಅಡಿ ಎತ್ತರವನ್ನೂ ಹೊಂದಿದ್ದಾರೆ. ಹೀಗಾಗಿ ಒಂದು ವೇಳೆ ಭಾರತ ವಿರುದ್ಧದ ಪಂದ್ಯದಲ್ಲಿ ಇವ್ರು ಮೈದಾನಕ್ಕಿಳಿದ್ರೆ ಇದೇ ಮೊದಲ ಬಾರಿಗೆ ಇಂಟರ್​ನ್ಯಾಷನಲ್​​ ಕ್ರಿಕೆಟ್​​ಗೆ ದೈತ್ಯ ಮಾನವನ ಪ್ರವೇಶವಾದಂತಾಗುತ್ತದೆ.

  ರಹಕೀಮ್ ಕಾರ್ನ್ ವಾಲ್​​​ರವರು ಪ್ರತಿಭಾವಂತ ಆಲ್​ರೌಂಡರ್​​ ಆಗಿದ್ದಾರೆ. ಈವರೆಗೆ ಒಟ್ಟು 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 23.90 ರ ಸರಾಸರಿಯಲ್ಲಿ 2224 ರನ್ ಗಳ ಜೊತೆಗೆ 260 ವಿಕೆಟ್ ಕಬಳಿಸಿದ್ದಾರೆ. ಇತ್ತೀಚಿಗೆ ಭಾರತ ‘ಎ’ ತಂಡದ ವಿರುದ್ಧದ ಪಂದ್ಯದಲ್ಲೂ 2 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳದಿರಲು ಅವರ ದೈಹಿಕತೆಯೇ ಕಾರಣವಾಗಿತ್ತು. ಆದ್ರೆ ಹಿಂದಿನಿಂದಲೂ ರಹಕೀಮ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮ್ಯಾಚ್ ವಿನ್ನರ್ ಆಗಿಯೂ ಸಾಬೀತುಪಡಿಸಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ರಾಬರ್ಟ್ ಹೇನ್ಸ್ ತಿಳಿಸಿದ್ದಾರೆ.

ವೀಂಡಿಸ್ ಟೆಸ್ಟ್ ತಂಡ: ಜಾಸನ್ ಹೊಲ್ಡರ್ (ನಾಯಕ) ಕೆ. ಬ್ರೈಥ್ ವೈಟ್ , ಡಾರೇನ್ ಬ್ರಾವೋ, ಶಮ್ರಾ ಬ್ರೂಕ್ಸ್, ಜಾನ್ ಕ್ಯಾಂಪ್ ಬೆಲ್, ರೊಸ್ಟನ್ ಚೇಸ್ , ರಹಕೀಮ್ ಕಾರ್ನ್ ವಾಲ್, ಶೇನ್ ಡೌರಿಚ್, ಶಾನಾನ್ ಗ್ಯಾಬ್ರಿಯೆಲ್, ಶಿಮ್ರಾನ್ ಹೆಟ್ಮಿಯರ್, ಶೈ ಹೋಪ್, ಕೀಮೊ ಪೌಲ್, ಕೇಮರ್ ರೋಚ್.

 

 

RELATED ARTICLES

Related Articles

TRENDING ARTICLES