ಬೆಳಗಾವಿ : ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಿಎಂ ಯಡಿಯೂರಪ್ಪನವರು ಭೇಟಿನೀಡಿದ್ದಾರೆ.
ನಗರದ ಕಪಿಲೇಶ್ವರ ಕಾಲೋನಿ, ಹಳೆ ಪಿಬಿ ರಸ್ತೆಯ ಪರಿಹಾರ ಕೇಂದ್ರಕ್ಕೆ ಸಿಎಂ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿ-ಗತಿಗಳ ಬಗ್ಗೆ ವಿಚಾರಿಸಿದರು. ನಂತರ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮ ಮಾರ್ಕಂಡೇಯ ನದಿ , ಸುತಗಟ್ಟಿ ಗ್ರಾಮ, ಘಟಪ್ರಭಾ ನದಿ, ನಿಪ್ಪಾಣಿ, ಚಿಕ್ಕೋಡಿ ಪ್ರದೇಶಗಳಿಗನ್ನು ವೀಕ್ಷಿಸಿದರು. ಪ್ರವಾಹ ಪೀಡಿತ ಜನರು ಯಾವೆಲ್ಲ ಕಷ್ಟಗಳನ್ನು ಎದುರಿಸುತ್ತಿದ್ಧಾರೆ, ಅವರಿಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಪರಿಶೀಲಿಸಿದ್ದಾರೆ.