Friday, December 27, 2024

ಮಾತೃ ಹೃದಯಿ ನಾಯಕಿಯ ಅಗಲಿಕೆಗೆ ಪ್ರಧಾನಿ ಮೋದಿ ಕಂಬನಿ

ನವದೆಹಲಿ : ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಮಾತೃ ಹೃದಯಿ ನಾಯಕಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಭಾರತದ ರಾಜಕಾರಣದ ಅಧ್ಯಾಯವೊಂದು ಅಂತ್ಯವಾಗಿದೆ. ಸುಷ್ಮಾ ಸ್ವರಾಜ್‌ ಒಬ್ಬರು ಅಪ್ಪಟ ದೇಶ ಭಕ್ತ ನಾಯಕಿ. ಅವರು ತಮ್ಮ ಇಡೀ ಜೀವನವನ್ನು ಸಾರ್ವಜನಿಕರಿಗಾಗಿ, ದೇಶಕ್ಕಾಗಿಯೇ ಅರ್ಪಿಸಿದ್ದರು. ಅನೇಕ ಜನರಿಗೆ ಅವರು ಪ್ರೇರಣಾ ಶಕ್ತಿಯಾಗಿದ್ದರು ಅಂತ ಮೋದಿ ಟ್ವೀಟ್ ಮೂಲಕ ಸುಷ್ಮಾ ಅವರನ್ನು ನೆನೆದಿದ್ದಾರೆ.
ಸುಷ್ಮಾ ಸ್ವರಾಜ್​ ಕೋಟ್ಯಂತರ ಜನ್ರಿಗೆ ಸ್ಫೂರ್ತಿಯ ಸೆಲೆ. ಅವರು ಅತ್ಯುತ್ತಮ ಸಂಸದೆಯಾಗಿದ್ರು. ಪಕ್ಷದಿಂದಾಚೆಗೂ ಕೂಡ ಮೆಚ್ಚುಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಬಿಜೆಪಿಯ ಸಿದ್ಧಾಂತ ಹಾಗೂ ಹಿತಾಸಕ್ತಿಗಳ ವಿಷ್ಯ ಬಂದ್ರೆ ಅವರೆಂದೂ ರಾಜಿಯಾಗ್ತಿರ್ಲಿಲ್ಲ. ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಅಪಾರ ಅಂತ ಮೋದಿ ಹೇಳಿದ್ದಾರೆ.
ಅತ್ಯುತ್ತಮ ಆಡಳಿತಾಧಿಕಾರಿಯಾಗಿದ್ದ ಸುಷ್ಮಾ ಸ್ವರಾಜ್​ರವರು ನಿರ್ವಹಿಸಿದ ಎಲ್ಲಾ ಹೊಣೆಗಾರಿಕೆಯೂ ಉನ್ನತ ಮಟ್ಟದ್ದಾಗಿತ್ತು. ತಮ್ಮ ಜವಬ್ದಾರಿಯಲ್ಲವರು ಅತ್ಯಂತ ಕಾಳಜಿ, ಶ್ರದ್ಧೆಯನ್ನು ಹೊಂದಿದ್ರು. ಇತರೆ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಉತ್ತಮಗೊಳಸುವಲ್ಲಿ ಬಹಳ ಪ್ರಮುಖ ಪಾತ್ರವಹಿಸಿದ್ರು, ಸಚಿವೆಯಾಗಿ ಅವರ ಸಹಾನುಭೂತಿ ಮುಖವನ್ನು ಕಂಡಿದ್ದೇವೆ. ಭಾರತೀಯರ ಪಾಲಿಗೆ ಅದೆಂಥಾ ಸಂಕಷ್ಟದಲ್ಲೂ ಸಹಾಯಕ್ಕೆ ಮುಂದಾಗದೆ ಇರ್ತಿರ್ಲಿಲ್ಲ ಅಂತ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.

ಇಲ್ಲಿವೆ ಅಜಾತಶತ್ರು ಸುಷ್ಮಾ ಸ್ವರಾಜ್​ರವರ ಅಪರೂಪದ ಫೋಟೋಗಳು

‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್​ ಬದುಕಿನ ಹಾದಿ?

RELATED ARTICLES

Related Articles

TRENDING ARTICLES