Sunday, November 24, 2024

ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್​ ಬದುಕಿನ ಹಾದಿ?

ಸುಷ್ಮಾ ಸ್ವರಾಜ್​ (67).. ರಾಷ್ಟ್ರ ರಾಜಕಾರಣ ಕಂಡ ಮಾತೃ ಹೃದಯದ ಚತುರ ನಾಯಕಿ. ಇನ್ನು ಅವರು ಬರೀ ನೆನಪು ಮಾತ್ರ…ನಿನ್ನೆ ರಾತ್ರಿ (ಮಂಗಳವಾರ) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಸುಪ್ರೀಂಕೋರ್ಟ್​​ನ ವಕೀಲೆಯಾಗಿ ಸೇವೆ ಸಲ್ಲಿಸಿದ್ದರು. ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು ಅಲ್ಲೂ ಬಹು ದೊಡ್ಡ ಯಶಸ್ಸನ್ನು ಕಂಡವರು. ಇಡೀ ರಾಷ್ಟ್ರವೇ ಮೆಚ್ಚುವ ನಾಯಕಿಯಾಗಿ ಬೆಳೆದವರು. ಒಟ್ಟು 7 ಬಾರಿ ಸಂಸದೆಯಾಗಿ, ಮೂರು ಬಾರಿ ಶಾಸಕಿಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆಯಾಗಿ, ಆರೋಗ್ಯ ಸಚಿವೆಯಾಗಿ, ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ದೆಹಲಿಯ 5ನೇ ಮುಖ್ಯಮಂತ್ರಿಯಾಗಿ ಕೂಡ ( 12 ಅಕ್ಟೋಬರ್ 1998 – 3 ಡಿಸೆಂಬರ್​ 1998) ಜವಾಬ್ದಾರಿ ನಿರ್ವಹಿಸಿದ್ದರು.
ಸುಷ್ಮಾ ಸ್ವರಾಜ್​
ಜನನ : 14 ಫೆಬ್ರವರಿ 1959, ಹರಿಯಾಣದ ಅಂಬಾಲಾ ಕಂಟ್​
ತಂದೆ : ಹರದೇವ್​ ಶರ್ಮಾ
ತಾಯಿ : ಲಕ್ಷ್ಮೀ ದೇವಿ

ಶಿಕ್ಷಣ, ವೃತ್ತಿ : ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿಯನ್ನು ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು. 1973ರಲ್ಲಿ ಭಾರತದ ಸುಪ್ರೀಂಕೋರ್ಟ್​​ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.

ರಾಜಕೀಯ ಜೀವನ :
1970ರಲ್ಲಿ ಎಬಿವಿಪಿಯೊಂದಿಗೆ ರಾಜಕೀಯ ಪ್ರವೇಶಿಸಿದರು. ಅವರ ಪತಿ ಸ್ವರಾಜ್​ ಕೌಶಲ್ ಅವರು ಸಮಾಜವಾದಿ ನಾಯಕ ಜಾರ್ಜ್​ ಫರ್ನಾಂಡಿಸ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರಿಂದ ಸುಷ್ಮಾ ಅವರು ಜಾರ್ಜ್​ ಫರ್ನಾಂಡಿಸ್​ ಅವರಿಗೆ ಆಪ್ತರಾದರು. 1975ರಲ್ಲಿ ಫರ್ನಾಂಡಿಸ್​ ಅವರ ಕಾನೂನು ರಕ್ಷಣಾ ತಂಡದ ಭಾಗವಾಗಿದ್ದರು. ಜಯಪ್ರಕಾಶ್ ನಾರಾಯಣ್​​ ಅವರೊಡನೆ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿ ಬಳಿಕ ಬಿಜೆಪಿ ಸೇರಿದರು. ಬಳಿಕ ‘ಕಮಲ’ ಪಡೆದ ಬಹು ದೊಡ್ಡ ನಾಯಕಿಯಾಗಿ ಬೆಳೆದಿದ್ದು ಈಗ ಇತಿಹಾಸ.
25ನೇ ವಯಸ್ಸಿನಲ್ಲಿ ಅಂಬಾಲಾ ಕಂಟ್​ನಿಂದ ಶಾಸನ ಸಭೆಗೆ ಆಯ್ಕೆಯಾದ ಅವರು ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. 1977 ರಿಂದ 1982ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು.
* 1977ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ದೇವಿ ಲಾಲ್ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ
* 1976 -ಜನತಾ ಪಕ್ಷದ ಹರಿಯಾಣ ರಾಜ್ಯಾಧ್ಯಕ್ಷೆಯಾಗಿ ಸೇವೆ.
ರಾಜಕಾರಣದ ಪ್ರಮುಖ ಹೆಜ್ಜೆಗಳು, ನಿಭಾಯಿಸಿದ ಹುದ್ದೆಗಳು
1977-82ರಲ್ಲಿ ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
19977-79 ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ
1982-90 ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
1982-90 ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ
1990-96 ರಲ್ಲಿ ರಾಜ್ಯಸಭೆಗೆ ಆಯ್ಕೆ (1ನೇ ಅವಧಿ)
1996-97 ಹನ್ನೊಂದನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)
1996(16 ಮೇ-1.ಜೂನ್​)​- ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ
1998-99( 10 ಮಾರ್ಚ್​​ 1998- 26 ಏಪ್ರಿಲ್​​​ 1999) ಹನ್ನೆರಡನೆಯ ಲೋಕಸಭೆ ಸದಸ್ಯೆ(3ನೇ ಅವಧಿ)
1999( 19 ಮಾರ್ಚ್​​- 12 ಅಕ್ಟೋಬರ್] ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ
1999( 13 ಅಕ್ಟೋಬರ್ – 3 ಡಿಸೆಂಬರ್] ದೆಹಲಿಯ ಮುಖ್ಯಮಂತ್ರಿ
1998(ನವೆಂಬರ್​​​) ದೆಹಲಿ ಅಸೆಂಬ್ಲಿಯ ಹಾಝ್ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು
2000-06 ರಾಜ್ಯಸಭೆ ಸದಸ್ಯೆ (4ನೇ ಅವಧಿ)
2003-04( 26 ಜನವರಿ – 22 ಮೇ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ
2006-09 ರಾಜ್ಯಸಭೆ ಸದಸ್ಯೆ (5ನೇ ಅವಧಿ)
2009-14( 16 ಮೇ 2009- 18 ಮೇ 2014) 15ನೇ ಲೋಕಸಭೆ ಸದಸ್ಯೆ ( 6ನೇ ಅವಧಿ)
2009( 3 ಜೂನ್​​​ 2006- 21 ಡಿಸೆಂಬರ್ 2009] ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
2009-14( 21 ಡಿಸೆಂಬರ್ 2009- 18 ಮೇ 2014) ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
2014( 26 ಮೇ) 16ನೇ ಲೋಕಸಭೆ ಸದಸ್ಯೆ (7ನೇ ಅವಧಿ)
26- ಮೇ 2014 -30 ಮೇ 2019 ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ

‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

RELATED ARTICLES

Related Articles

TRENDING ARTICLES