Saturday, November 23, 2024

ಪಂಚಭೂತಗಳಲ್ಲಿ ಲೀನರಾದ ಸುಷ್ಮಾ ಸ್ವರಾಜ್​

ನವದೆಹಲಿ : ರಾಷ್ಟ್ರ ರಾಜಕಾರಣ ಕಂಡ ಅಪ್ರತಿಮ ನಾಯಕಿ, ಮಾತೃ ಹೃದಯಿ ಜನ ಸೇವಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​ ಇನ್ನು ಬರೀ ನೆನಪು ಮಾತ್ರ. ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ವಿಧಿವಶರಾದ ಚತುರ ನಾಯಕಿ ಸುಷ್ಮಾ ಸ್ವರಾಜ್​ ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಸಹಲ ಸರ್ಕಾರಿ ಗೌರವಗಳೊಂದಿಗೆ ಜನಪತ್​​ನ ಲೋಧಿ ರೋಡ್​​ನಲ್ಲಿರೋ ವಿದ್ಯುತ್ ಚಿತಾಗಾರದಲ್ಲಿ ಸುಷ್ಮಾ ಸ್ವರಾಜ್​​ರವರ ಅಂತ್ಯಕ್ರಿಯೆ ನೆರವೇರಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುಷ್ಮಾ ಸ್ವರಾಜ್​​ ಅವರ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹಾಕಿ ಸರ್ಕಾರಿ ಗೌರವ ಸಲ್ಲಿಸಲಾಯ್ತು. ಸುಷ್ಮಾ ಪತಿ ಸ್ವರಾಜ್​​ ಕೌಶಲ್​ ಮತ್ತು ಪುತ್ರಿ ಬನ್ಸುರಿ ಸ್ವರಾಜ್, ಸೆಲ್ಯೂಟ್​ ಹೊಡೆದು ನಮಿಸಿದರು. ಅನಂತರ ಬಿಜೆಪಿ ಕಚೇರಿಯಿಂದ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು.
ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಸಚಿವರಾದ ರಾಜನಾಥ್​ ಸಿಂಗ್, ರವಿಶಂಕರ್​​ ಪ್ರಸಾದ್​, ಪಿಯೂಷ್​ ಗೋಯಲ್ ಮತ್ತಿತರರು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ರು.
ಲೋಧಿ ರೋಡ್​​ನ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನದ ನಂತರ ಸುಷ್ಮಾ ಸ್ವರಾಜ್​ರವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡ ಎಲ್​​.ಕೆ. ಅಡ್ವಾಣಿ, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ , ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಭೂತಾನ್​ ಮಾಜಿ ಪ್ರಧಾನಿ ಶೆರಿಂಗ್​​​ ತೋಬ್ಗೇ ಮತ್ತಿತರರು ಉಪಸ್ಥಿತರಿದ್ದರು.


ಇದ್ದಿಲಲ್ಲಿ ಸುಷ್ಮಾ ಸ್ವರಾಜ್​ ಭಾವಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಕಲಾವಿದ..!

ಟ್ವಿಟರ್​​ ಫಾಲೋವರ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರು ಸುಷ್ಮಾ ಸ್ವರಾಜ್..!

ಟ್ವಿಟರ್​​ ಫಾಲೋವರ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರು ಸುಷ್ಮಾ ಸ್ವರಾಜ್..!

ಮಮತಾಮಯಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದಿದ್ದ ಅಪರೂಪದ ಫೋಟೋಗಳು

ಕನ್ನಡಿಗರಲ್ಲದಿದ್ದರೂ ಕರುನಾಡ ಮಗಳಾಗಿದ್ದರು ಸುಷ್ಮಾ ಸ್ವರಾಜ್..!

ಮಾತೃ ಹೃದಯಿ ನಾಯಕಿಯ ಅಗಲಿಕೆಗೆ ಪ್ರಧಾನಿ ಮೋದಿ ಕಂಬನಿ

ಇಲ್ಲಿವೆ ಅಜಾತಶತ್ರು ಸುಷ್ಮಾ ಸ್ವರಾಜ್​ರವರ ಅಪರೂಪದ ಫೋಟೋಗಳು

ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್​ ಬದುಕಿನ ಹಾದಿ?

‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

RELATED ARTICLES

Related Articles

TRENDING ARTICLES