ನವದೆಹಲಿ : ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಕಳುಹಿಸಿದ್ದಕ್ಕೆ ಬಂಗಾಳದ ಹುಲಿ, ಭಾರತ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಫುಲ್ ಗರಂ ಆಗಿದ್ದಾರೆ. ದ್ರಾವಿಡ್‌ಗೆ ನೋಟಿಸ್ ನೀಡಿದ್ದಕ್ಕೆ ಬಿಸಿಸಿಐ ವಿರುದ್ಧ ಗಂಗೂಲಿ ನೇರಾ ನೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ್ರಾವಿಡ್ ಇಂಡಿಯಾ ಸಿಮೆಂಟ್ನ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿ ಎರಡು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರ ಅಂತ ಸ್ವಹಿತಾಸಕ್ತಿ ಸಂಘರ್ಷದ ಹೆಸರಲ್ಲಿ ಬಿಸಿಸಿಐ ಅಧಿಕಾರಿಗಳು ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ವಿಷಯ ಬಹಿರಂಗವಾಗ್ತಿದ್ದಂತೆ ಸೌರವ್ ಗಂಗೂಲಿ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಫ್ಯಾಷನ್…..ಸ್ವಹಿತಾಸಕ್ತಿಯ ಸಂಘರ್ಷ….ಸುದ್ದಿಯಲ್ಲಿ ಉಳಿಯಲು ಉತ್ತಮ ಮಾರ್ಗವೆಂದರೆ ದೇವರು ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡಬೇಕು …… ದ್ರಾವಿಡ್‌ಗೆ ಬಿಸಿಸಿಐ ನೀತಿ ಸಂಹಿತೆ ಅಧಿಕಾರಿಯಿಂದ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಬಂದಿದೆ ,” ಅಂತ ಗಂಗೂಲಿ ಟ್ವೀಟ್ ಮಾಡಿದ್ದಾರೆ.
ಅದೇ ರೀತಿ ಹರ್ಭಜನ್ ಸಿಂಗ್ ಕೂಡ ಬಿಸಿಸಿಐ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಗಂಗೂಲಿಯವರ ಟ್ವೀಟ್ಗೆ ರೀಟ್ವೀಟ್ ಮಾಡಿರುವ ಅವರು, ನಿಜಗಿಯೂ? ಇದೆಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದು ಗೊತ್ತಿಲ್ಲ..ಭಾರತೀಯ ಕ್ರಿಕೆಟ್ಗೆ ಅವರಿಗಿಂತ (ದ್ರಾವಿಡ್) ಉತ್ತಮ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಅವರಿಗೆ ನೋಟಿಸ್ ಕಲಿಸುವ ಮೂಲಕ ಅವಮಾನ ಮಾಡಲಾಗಿದೆ..ಕ್ರಿಕೆಟ್ಗೆ ಅವರ ಸೇವೆ ಅಗತ್ಯವಿದೆ…ದೇವರೇ ಭಾರತ ಕ್ರಿಕೆಟನ್ನು ಕಾಪಾಡಬೇಕು ಅಂತ ಹರ್ಭಜನ್ ಸಿಂಗ್ ಖಾರವಾಗಿ ಬಿಸಿಸಿಐಗೆ ಚಾಟಿ ಬೀಸಿದ್ದಾರೆ.
ದ್ರಾವಿಡ್‌ಗೆ ನೋಟಿಸ್ ನೀಡಿದ್ದಕ್ಕೆ ಬಿಸಿಸಿಐ ವಿರುದ್ಧ ಗಂಗೂಲಿ ಗರಂ..!
TRENDING ARTICLES