Thursday, May 15, 2025

ದರ್ಶನ್​ ಅಭಿನಯಕ್ಕೆ ಫಿದಾ ಆದ ಪುತ್ರ ವಿನೀಶ್ ಸಂಭ್ರಮಿಸಿದ್ದು ಹೀಗೆ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಬಹು ದೊಡ್ಡ ತಾರಾಗಣವಿರುವ, ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ದುರ್ಯೋಧನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ‘ದರ್ಶನ’ ಪಡೆಯಲು ಅಭಿಮಾನಿಗಳು ಕಾಯ್ತಿದ್ದಾರೆ. ಆಗಸ್ಟ್​​ 9ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸ್ಪೆಷಲ್ ಶೋನಲ್ಲಿ ದರ್ಶನ್ ತಮ್ಮ ಫ್ಯಾಮಿಲಿ ಜೊತೆ ‘ಕುರುಕ್ಷೇತ್ರ’ ಸಿನಿಮಾವನ್ನು ನೋಡಿದ್ದಾರೆ. ತಂದೆಯ ದುರ್ಯೋಧನ ಅವತಾರವನ್ನು ನೋಡಿ ಮಗ ವಿನೀಶ್ ಅಪ್ಪನ ನಟನೆಗೆ ಫುಲ್​ ಫಿದಾ ಆಗಿದ್ದು, ಅಪ್ಪನ ಕಟೌಟ್​ ಪಕ್ಕಾ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾನೆ.
ಇನ್ನು ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ರವಿಶಂಕರ್, ಅರ್ಜುನ್ ಸರ್ಜಾ, ನಿಖಿಲ್​ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್, ಮೇಘನಾರಾಜ್​, ಹರಿಪ್ರಿಯಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ನಟಿಸಿದ್ದಾರೆ.

RELATED ARTICLES

Related Articles

TRENDING ARTICLES