ಕೊಪ್ಪಳ: ಇಲ್ಲಿನ ಮುನಿರಬಾದಿನ ಹಿನ್ನೀರಿನಲ್ಲಿ ಕಾರ್ಖಾನೆಗಳು ದೊಡ್ಡ ದೊಡ್ಡ ಪೈಪ್ಗಳನ್ನು ಹಾಕಿ ನೀರು ಕದಿಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಕೊಪ್ಪಳ ತಾಲೂಕಿನ ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ ಕಂಪನಿಗಳು ಸೇರಿದಂತೆ ಹಲವು ಕಾರ್ಖಾನೆಗಳು ಮೋಟರ್ ಪಂಪ್ಗಳನ್ನು ಹಾಕಿ ಹಗಲು-ರಾತ್ರಿ ಎನ್ನದೇ ನೀರು ಕದಿಯುತ್ತಿವೆ ಎನ್ನಲಾಗುತ್ತಿದ್ದು, ಸದ್ಯ ಡ್ಯಾಂನಲ್ಲಿ ಕೇವಲ 32 ಟಿಎಂಸಿ ನೀರು ಇದೆ. ಜಲಾಶಯದಲ್ಲಿನ ನೀರನ್ನು ಕಾರ್ಖಾನೆಗಳು ಕದಿಯುತ್ತಿದ್ದರೆ ಮೊದಲ ಬೆಳೆಯ ನೀರಿಕ್ಷೆಯಲ್ಲಿರುವ ಮೂರು ಜಿಲ್ಲೆಗಳ ರೈತರಿಗೆ ನೀರಿನ ಸಮಸ್ಯೆ ಎದುರಾಗಿದೆ.
ಕೊಪ್ಪಳ ಭಾಗದ ಲಕ್ಷಾಂತರ ರೈತರಿಗೆ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಗೆ ಹಾಗೂ ಆಂಧ್ರ, ತೆಲಂಗಾಣ ಭಾಗಕ್ಕೆ ತುಂಗಭದ್ರ ಜಲಾಶಯ ಜೀವನಾಡಿಯಾಗಿದೆ. ಈಗಾಗಲೇ ಬರ ಎದುರಾಗಿ ಮೂರು ವರ್ಷ ಕಳೆದಿದೆ. ತುಂಗಭದ್ರ ಜಲಾಶಯದಲ್ಲಿ ನೀರಿದ್ದರೂ ಅದು ಎರಡನೇ ಬೆಳೆಗೆ ಬಿಡುವುದಿಲ್ಲ ಅಂತ ಹೇಳಲಾಗಿದೆ. ಕುಡಿಯುವುದಕ್ಕೆ ಮಾತ್ರ ಬೇಸಿಗೆಯಲ್ಲಿ ನೀರು ಅಗತ್ಯವಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಜಲಾಶಯದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾರ್ಖಾನೆಗಳೊಂದಿಗೆ ಕೈ ಜೋಡಿಸಿರುವುದರಿಂದ ಡ್ಯಾಂ ನೀರು ಕಳ್ಳತನ ಆಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಕೊಪ್ಪಳದ ಮುನಿರಬಾದಿನ ಹಿನ್ನೀರಿನಲ್ಲಿ ಕಾರ್ಖಾನೆಗಳು ದೊಡ್ಡ ದೊಡ್ಡ ಪೈಪ್ಗಳನ್ನು ಹಾಕಿ ನೀರು ಕದಿಯುತ್ತಿದೆ ಎನ್ನಲಾಗುತ್ತಿದೆ. ಕೊಪ್ಪಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ ಕಂಪನಿಗಳು ಸೇರಿದಂತೆ ಹಲವು ಕಾರ್ಖಾನೆಗಳು ಮೋಟರ್ ಪಂಪ್ಗಳನ್ನು ಹಾಕಿ ಹಗಲು-ರಾತ್ರಿ ಎನ್ನದೇ ನೀರು ಕದಿಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಡ್ಯಾಂನಲ್ಲಿ ಕೇವಲ 36 ಟಿಎಂಸಿ ನೀರು ಇದೆ. ಜಲಾಶಯದಲ್ಲಿನ ನೀರನ್ನು ಕಾರ್ಖಾನೆಗಳು ಕದಿಯುತ್ತಿದ್ದರೆ ಬೇಸಿಗೆ ಯಲ್ಲಿ ಮೂರು ಜಿಲ್ಲೆಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ ಎಂಬುದು ಈ ಭಾಗದ ಜನರ ಅಳಲು.
ವಿಷಯ ತಿಳಿದ ಮಾಜಿ ಸಚಿವ ಶಿವರಾಜ್ ತಂಗಡಗಿ ಹಾಗೂ ರೈತ ಮುಖಂಡರು ಜಲಾಶಯಕ್ಕೆ ಮುತ್ತಿಗೆ ಹಾಕಿದ್ರು. ಜಲಾಶಯದಲ್ಲಿ ಕೇವಲ 36 ಟಿ.ಎಮ್.ಸಿ.ನೀರು ಸಂಗ್ರಹವಾದ್ರೂ ಅಧಿಕಾರಿಗಳು ಕದ್ದು ಮುಚ್ಚಿ ಕಾರ್ಖಾನೆಗಳಿಗೆ ನೀರು ಬಿಡೋದನ್ನ ಪ್ರಶ್ನಿಸಿ ಶಿವರಾಜ್ ತಂಗಡಗಿ ಅಧಿಕಾರಿಗಳನ್ನ ತರಾಟೆಗೆ ತಗೆದುಕೊಂಡರು. ಬೆಳೆಗಳಿಗೆ ನೀರು ಬಿಡಲು ಹಿಂದೇಟು ಹಾಕುತ್ತಿರೋ ಅಧಿಕಾರಿಗಳು,ರಾತ್ರೋ ರಾತ್ರಿ ಜಿಂದಾಲ್,ಹೊಸಪೇಟ್ ಸ್ಟೀಲ್ ಕಾರ್ಖಾನೆಗಳಿಗೆ ಅನಧಿಕೃತ ನೀರು ಬಿಡುತ್ತಿದ್ದಾರೆ.ರೈತರು ಕೇಳಿದ್ರೆ ನೀರಿಲ್ಲ ಅನ್ನುತ್ತಿರೋ ಅಧಿಕಾರಿಗಳ ವಿರುದ್ದ ಮಾಜಿ ಸಚಿವರು ಗರಂ ಆದ್ರು. ಕೊನೆಗೆ ಅವರನ್ನೆ ಕರೆದುಕೊಂಡು ಜಲಾಶಯ ಸುತ್ತಿ ಕಾರ್ಖಾನೆಗಳಿಗೆ ನೀರು ಹೋಗುವದನ್ನ ಗಮನಕ್ಕೆ ತಂದ್ರು,ಕೂಡಲೇ ಮೋಟರ್ ತೆಗೆಯಬೇಕೆಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದ್ರು.
ಅಸಲಿಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯ 36 ಟಿ.ಎಮ್.ಸಿ.ನೀರು ಸಂಹ್ರವಾಗಿದೆ.ನಿನ್ನೆಯಿಂದ ಒಳ ಹರಿವು ಹೆಚ್ಚಾಗಿದ್ದು ಜಲಾಶಯಕ್ಕೆ ನೀರು ಹರಿದು ಬರ್ತಿದೆ. 34 ಟಿ.ಎಮ್.ಸಿ ನೀರಿದ್ರೂ ಇದುವರೆಗೂ ಕಾಲುವೆಗೆ ನೀರು ಬಿಟ್ಟಿಲ್ಲ.ಮೂರು ಜಿಲ್ಲೆಯ ಜನ ಒಂದು ಬೆಳೆ ಬೆಳೆಯೋದು ಕಷ್ಟವಾಗಿದೆ. ಇಗಾಗಲೇ ಭತ್ತ ನಾಟಿ ಮಾಡಿದ ರೈತರು ನೀರಿಗಾಗಿ ಕಾದು ಕುಳತಿದ್ದಾರೆ. ಕನಕಗರಿ,ಗಂಗಾವತಿಯಲ್ಲಿ ಬಿಜೆಪಿಯ ಶಾಸಕರಿದ್ರೂ ನೀರು ತರಲಾಗ್ತಿಲ್ಲ ಅನ್ನೋದು ಶಿವರಾಜ್ ತಂಗಡಗಿ ಆರೋಪ. ಹೀಗಾಗಿ ಮೊದಲನೆ ಬೆಳೆಗೆ ನೀರಿಲ್ಲ ಎಂದು ರೈತರೊಂದಿಗೆ ಜಲಾಶಯ ಮುತ್ತಿಗೆ ಹಾಕಿದ್ದಾರೆ.ಯಾವಾಗ ತಂಗಡಗಿ ಜಲಾಶಯ ಮುತ್ತಿಗೆ ಹಾಕಿದ ಬಳಿಕ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ದೆಹಲಿಗೆ ದೌಡಾಯಿಸಿ ರೈತರಿಗೆ ನೀರು ಬಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.ನಾಳೆಯಿಂದ ತುಂಗಭದ್ರಾ ಜಲಾಶಯದಿಂದ ನೀರು ಬಿಡಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಅಂತ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್ ಅವರು ಹೇಳಿದ್ದಾರೆ.
-ಶುಕ್ರಾಜ್, ಕೊಪ್ಪಳ