Monday, November 25, 2024

ಮೈದುಂಬಿ ಹರಿಯುತ್ತಿದೆ  ಗೋಕಾಕ್​ ಫಾಲ್ಸ್

ಬೆಳಗಾವಿ : ಕರುನಾಡ ನಯಾಗರ ಫಾಲ್ಸ್​ ಎಂದೇ ಹೆಸರಾಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್​ ನಲ್ಲಿ ನೀರು ಧುಮ್ಮಿಕ್ಕುತ್ತಿದೆ.

ದಕ್ಷಿಣ ಮಹಾರಾಷ್ಟ್ರದದಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಅಲ್ಲಿನ ಬಹುತೇಕ ಡ್ಯಾಂಗಳು ಭರ್ತಿಯಾಗಿವೆ.ಹೀಗಾಗಿ ಅಲ್ಲಿಂದ 3 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ನದಿಗೆ ಹರಿ ಬಿಡಲಾಗುತ್ತಿದೆ. ಪರಿಣಾಮ ಏಳು ವರ್ಷದ ಬಳಿಕ ಗೋಕಾಕ್ ಫಾಲ್ಸ್​ ಧುಮ್ಮಿಕ್ಕುತ್ತಿದೆ. ಬೆಳಗಾವಿಯಿಂದ ಸುಮಾರು 58 ಕಿಲೋ ಮೀಟರ್ ದೂರದಲ್ಲಿ ಗೋಕಾಕ್ ಫಾಲ್ಸ್​ ಇದೆ. ಜಲಪಾತದ ಸಮೀಪದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ, ಉದ್ಯಾನವನ ಇದೆ. ಜಲಪಾತ ನೋಡಲು ತೂಗು ಸೇತುವೆಯನ್ನು ಸಹ ನಿರ್ಮಿಸಲಾಗಿದೆ. ಇನ್ನು, ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರು ವಾಸಿಯಾಗಿರುವ ಗೋಕಾಕ್  ಫಾಲ್ಸ್​ನ ಈ ಸೌಂದರ್ಯವನ್ನು ಕಂಣ್ತುಂಬಿಕೊಳ್ಳುಲು ಪ್ರವಾಸಿಗರು ದೂರದ ಊರುಗಳಿಂದ ಬರುತ್ತಿದ್ದಾರೆ.     

RELATED ARTICLES

Related Articles

TRENDING ARTICLES