ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ಹಾಗೂ 35 (ಎ ) ವಿಧಿಯನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ರದ್ದು ಮಾಡಲಾಗಿದೆ. ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕಣಿವೆ ರಾಜ್ಯಕ್ಕೆ ಸಿಕ್ಕಿದ 60 ವರ್ಷಗಳ ವಿಶೇಷ ಸ್ಥಾನ-ಮಾನ ರದ್ದಾಂದಂತಾಗಿದೆ.
ಕಲಂ 370 ಮತ್ತು 35ಎ ರದ್ದಾಗಿರುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಇನ್ಮುಂದೆ ಭಾರತ ಸರ್ಕಾರದ ಎಲ್ಲಾ ಕಾನೂನುಗಳು ಜಾರಿಗೆ ಬರಲಿವೆ. ಇತರೆ ಎಲ್ಲಾ ಕೇಂದ್ರಾಡಳಿತ ಪ್ರದೇಶ ಹೊಂದಿರುವ ಸ್ಥಾನಮಾನವನ್ನೇ ಅದು ಹೊಂದಿರಲಿದೆ, ಈ ಹಿಂದಿದ್ದ ಯಾವ್ದೇ ವಿಶೇಷ ಅಧಿಕಾರ ಇನ್ಮುಂದೆ ಜಮ್ಮುಕಾಶ್ಮೀರಕ್ಕೆ ಇರಲ್ಲ.
ಇನ್ನು ಜಮ್ಮು-ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಜಮ್ಮು-ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಳಿತ ಪ್ರದೇಶಗಳಾಗಿರುತ್ತವೆ. ಜಮ್ಮು ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶವಾಗಿದ್ದು, ಲಡಾಖ್ ವಿಧಾಸಭೆಯನ್ನು ಹೊಂದಿರುವುದಿಲ್ಲ.ಅದು ಕೇವಲ ಕೇಂದ್ರಾಡಳಿತ ಪ್ರದೇಶವಾಗಿರುತ್ತೆ.
ದೆಹಲಿ, ಚಂಡೀಗಢ, ದಿಯು-ದಮನ್, ದಾದ್ರಾ-ನಗರ್ ಹಾವೇಲಿ, ಪುದುಚೆರಿ, ಅಂಡಮಾನ-ನಿಕೋಬಾರ್ ಮತ್ತು ಲಕ್ಷದ್ವೀಪಗಳು ಈ 7 ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಇದೀಗ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಸೇರಿ 9 ಕೇಂದ್ರಾಡಳಿತ ಪ್ರದೇಶಗಳಾಗಿವೆ.
370ನೇ ವಿಧಿ ರದ್ದು ; ಜಮ್ಮು-ಕಾಶ್ಮೀರ ಇನ್ಮುಂದೆ ಕೇಂದ್ರಾಡಳಿತ ಪ್ರದೇಶ..!
TRENDING ARTICLES