Tuesday, December 3, 2024

ಚೊಚ್ಚಲ ಪಂದ್ಯದಲ್ಲೇ ಸೈನಿ ಶೈನಿಂಗ್ -ವಿಂಡೀಸ್ ಉಡೀಸ್

ಪ್ಲೋರಿಡಾ : ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಯುವ ವೇಗಿ ನವದೀಪ್​ ಸೈನಿ (17 ಕ್ಕೆ 3 ) ಮಾರಕ ದಾಳಿಯ ಪರಿಣಾಮ ಭಾರತ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿದೆ.
ಅಮೆರಿಕಾದ ಪ್ಲೋರಿಡಾದ ಲಾಡರ್ ಹಿಲ್​ನ ಸೆಂಟ್ರಲ್​ ಬ್ರೋವರ್ಡ್​ ರೀಜಿನಲ್ ಪಾರ್ಕ್​ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ಮ್ಯಾಚ್​ನ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಗೆ ನವದೀಪ್ ಸೈನಿ ಪದಾರ್ಪಣೆ ಮಾಡಿದರು. ಯುವ ವೇಗಿಯ ಅದ್ಭುತ ಬೌಲಿಂಗ್ ದಾಳಿ ಹಾಗೂ ಅನುಭವಿ ಭವನೇಶ್ವರ್ ಕುಮಾರ್ (19ಕ್ಕೆ 2) ಬೌಲಿಂಗ್​​ ಎದುರಿಸಲಾಗದೆ ವೆಸ್ಟ್​ ಇಂಡೀಸ್​ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳ್ಕೊಂಡು ಕೇವಲ 95ರನ್ ಮಾಡಿತು.
ಸುಲಭ ಗುರಿ ಬೆನ್ನತ್ತಿದ ಭಾರತ ಪ್ರಯಾಸದ ಗೆಲುವನ್ನು ಪಡೆಯಿತು. 17.2 ಓವರ್​ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಉಪನಾಯಕ ರೋಹಿತ್ ಶರ್ಮಾ (24), ನಾಯಕ ವಿರಾಟ್ ಕೊಹ್ಲಿ (19)ರನ್​ ಗಳಿಸಿದ್ದೇ ಭಾರತದ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್. ಮೊದಲ ಮ್ಯಾಚ್​ನಲ್ಲೇ ಮಿಂಚಿದ ಸೈನಿ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸೈನಿ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದಾರೆ.

RELATED ARTICLES

Related Articles

TRENDING ARTICLES