ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ಗೆದ್ದು ಬೀಗಿದೆ. ನಿನ್ನೆ ಅಮೆರಿಕಾದ ಪ್ಲೋರಿಡಾದ ಲಾಡರ್ ಹಿಲ್ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಆರ್ಸಿಬಿ ವೇಗಿ ನವದೀಪ್ ಸೈನಿ.
ಮೊದಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ (17ಕ್ಕೆ 3) ನೀಡಿದ ಸೈನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಅಷ್ಟೇ ಅಲ್ಲದೆ ಈ ಮ್ಯಾಚ್ನಲ್ಲಿ ಸೈನಿ ವಿಶೇಷ ದಾಖಲೆಯನ್ನು ಕೂಡ ಮಾಡಿದ್ದಾರೆ.
ತಂಡದ ಪರ 20ನೇ ಓವರ್ ಬೌಲಿಂಗ್ ಮಾಡಿದ ಸೈನಿ.. ಆ ಓವರ್ನಲ್ಲಿ ಎದುರಾಳಿಗೆ ತಂಡಕ್ಕೆ ಒಂದೇ ಒಂದು ರನ್ ಬಿಟ್ಟು ಕೊಡಲಿಲ್ಲ. ಟಿ20 ಇಂಟರ್ನ್ಯಾಷನಲ್ನಲ್ಲಿ ಕೊನೆಯ ಓವರ್ ಮೇಡನ್ ಮಾಡಿದ ಭಾರತದ ಮೊದಲ ಹಾಗೂ ವಿಶ್ವಕ್ರಿಕೆಟ್ನ 4ನೇ ಬೌಲರ್ ಎನಿಸಿಕೊಂಡಿದ್ದಾರೆ. 2008ರಲ್ಲಿ ನ್ಯೂಜಿಲೆಂಡ್ನ ಜೀತನ್ ಪಟೇಲ್, 2010ರಲ್ಲಿ ಪಾಕಿಸ್ತಾನದ ಮೊಹಮ್ಮದ್ ಆಮಿರ್, 2019ರಲ್ಲಿ ಸಿಂಗಾಪುರದ ಜನಕ್ ಪ್ರಕಾಶ್ ಈ ಸಾಧನೆ ಮಾಡಿದ್ದರು.
ಚೊಚ್ಚಲ ಮ್ಯಾಚ್ನಲ್ಲೇ ದಾಖಲೆ ಬರೆದ ಸೈನಿ..!
TRENDING ARTICLES