Wednesday, January 29, 2025

ಜೆಡಿಎಸ್​ ವಿರುದ್ಧವೇ ಸಿಡಿದೆದ್ದ ದೇವೇಗೌಡ..!

ಮೈಸೂರು : ಸ್ವಪಕ್ಷದ ವಿರುದ್ಧವೇ ಮಾಜಿ ಸಚಿವ ಜಿ.ಟಿ ದೇವೇಗೌಡ ಸಿಡಿದೆದ್ದಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ‘ಇದು ನನ್ನ ಕೊನೆಯ ಚುನಾವಣೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ, ನನಗೆ ರಾಜಕೀಯ ಸಾಕು’ ಅಂತ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ್ರು.
ಈ ನಿರ್ಧಾರದ ಬಗ್ಗೆ ಜೆಡಿಎಸ್​ ವರಿಷ್ಠರಿಗೆ ಈಗಾಗಲೇ ಹೇಳಿದ್ದೇನೆ. ಹೆಚ್​.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿಯವರಿಗೂ ತಿಳಿಸಿದ್ದೇನೆ ಎಂದರು.
ನಾನು ಯಾರ ಹಂಗಲ್ಲೂ ಇಲ್ಲ, ನನಗ್ಯಾರೂ ರಾಜಕೀಯ ಗುರುಗಳಿಲ್ಲ. HDD, HDK, ಸಿದ್ದರಾಮಯ್ಯರಿಂದ ಹಣ ಸಹಾಯ ಪಡೆದಿಲ್ಲ.
ಚುನಾವಣೆ ವೇಳೆಯೂ ಪಕ್ಷದಿಂದ ಒಂದು ರೂಪಾಯಿ ಪಡೆದಿಲ್ಲ. ಮುಂದಿನ ಚುನಾವಣೆಗೆ ಹರೀಶ್ ಗೌಡನೇ ಅಭ್ಯರ್ಥಿ ಅಂದಿದ್ರು. MLC ಮಾಡ್ತೇವೆ ಅಂದಿದ್ರು, ಯಾವುದನ್ನೂ ಮಾಡಲಿಲ್ಲ. ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ಅಂದ್ರೂ ಕೊಟ್ರು. ನನಗಿಷ್ಟವಾದ ಖಾತೆಯನ್ನು ಕೊಡಲಿಲ್ಲ, ಹೇಳ್ತಾ ಹೋದ್ರೆ ಸಾಕಷ್ಟಿದೆ ಅಂತ ಜೆಡಿಎಸ್​​ ವಿರುದ್ಧವೇ ಜಿಟಿಡಿ ಗುಡುಗಿದ್ರು.

RELATED ARTICLES

Related Articles

TRENDING ARTICLES