ಇತ್ತೀಚೆಗೆ ಮುಕ್ತಾಯವಾದ ವರ್ಲ್ಡ್ಕಪ್ನಲ್ಲಿ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ, ಸೆಮಿಫೈನಲ್ನಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಕೆರಿಬಿಯನ್ ವಿರುದ್ಧ ಟಿ20, ಒಡಿಐ, ಟೆಸ್ಟ್ ಸರಣಿಯನ್ನು ಗೆದ್ದು ವಿಶ್ವಕಪ್ ಆಘಾತದಿಂದ ಹೊರ ಬರಲು ರೆಡಿಯಾಗಿದೆ.
ಇಂದಿನಿಂದ ಟಿ20 ಸರಣಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಪಡೆಯಲ್ಲಿ ಹೊಸಬರು ತಮ್ಮ ಸಾಮರ್ಥ್ಯ ಸಾಬೀತು ಪಡಿಸುವ ಉತ್ಸಾಹದಲ್ಲಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿರುವ ಮ್ಯಾಚ್ನಲ್ಲಿ ಶಿಖರ್ ಧವನ್ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಳಿಯಲಿದ್ದಾರೆ. 4 ಮತ್ತು 5ನೇ ಕ್ರಮಾಂಕದಲ್ಲಿ ಕ್ರಮವಾಗಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಆಡುವ ಸಾಧ್ಯತೆ ಹೆಚ್ಚಿದೆ. ಯುವ ಆಟಗಾರ ಶ್ರೇಯಸ್ ಅಯ್ಯರ್ ಕೂಡ ಈ ಸ್ಥಾನಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. 6ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಆಡುವುದು ಕನ್ಫರ್ಮ್. 7ನೇ ಸ್ಲಾಟ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ಇರಲಿದ್ದಾರೆ. 8ನೇ ಕ್ರಮಾಂಕಕ್ಕೆ ಕೃನಾಲ್ ಪಾಂಡ್ಯ ಚಾನ್ಸ್ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್ ಬೌಲಿಂಗ್ ವಿಭಾಗಕ್ಕೆ ಬಲತುಂಬಲಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಆರ್ಸಿಬಿ ವೇಗಿ ನವದೀಪ್ ಸೈನಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ತವಕದಲ್ಲಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ಗಂಟೆಗೆ ಮ್ಯಾಚ್ ಆರಂಭವಾಗಲಿದೆ.
ಭಾರತ – ವಿಂಡೀಸ್ ಟಿ20 ಫೈಟ್ : ವಿರಾಟ್ ಪಡೆಯಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್?
TRENDING ARTICLES