Saturday, November 23, 2024

ಫೋನ್ ನಂಬರ್ ಹೇಳಿ ಸಾರಿ ಕೇಳಿದ ಸನ್ನಿ ಲಿಯೋನ್ .!

ಡೆಲ್ಲಿ ಮೂಲದ ವ್ಯಕ್ತಿಯ ಮೊಬೈಲ್ ನಂಬರನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದಕ್ಕೆ ಬಾಲಿವುಡ್​ ನಟಿ ಸನ್ನಿಲಿಯೋನ್ ಮಾಧ್ಯಮದ ಮುಂದೆ ಆ ವ್ಯಕ್ತಿಯಲ್ಲಿ ಕ್ಷಮೆ ಕೇಳಿದ್ದಾರೆ.

ಕಳೆದ ಶುಕ್ರವಾರ ತೆರೆಕಂಡಿರುವ ಸನ್ನಿಲಿಯೋನ್ ಅಭಿನಯದ ’ಅರ್ಜುನ್ ಪಟಿಯಾಲ’ ಎಂಬ ಪಂಜಾಬಿ ಸಿನಿಮಾದ ದೃಶ್ಯ ಒಂದರಲ್ಲಿ ಸನ್ನಿ ಮೊಬೈಲ್ ನಂಬರ್ ಅನ್ನು ಹೇಳುತ್ತಾರೆ, ಸಿನಿಮಾ ಮಾಡುವಾಗ ಆ ನಂಬರ್ ಯಾರಿಗೆ ಸೇರಿದ್ದು ಎಂದು ಚೆಕ್​​ ಮಾಡಿಕೊಂಡಿಲ್ಲ. ಆ ನಂಬರ್ ದೆಹಲಿ ಮೂಲದ ಒಬ್ಬ ಉದ್ಯಮಿ ಅರ್ಜುನ್ ಅಗರ್ವಾಲ್​​​ ಸೇರಿದ್ದಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಅದು ಸನ್ನಿ ಮೊಬೈಲ್ ನಂಬರ್ ಎಂದು ತಿಳಿದು ಆ ವ್ಯಕ್ತಿಗೆ ದಿನಕ್ಕೆ 500 ರಿಂದ 600 ಕರೆಗಳನ್ನು ಮಾಡಿ ನಾನು ಸನ್ನಿಲಿಯೋನ್ ಹತ್ತಿರ ಮಾತನಾಡಬೇಕು ಫೋನ್ ಕೊಡಿ ಎಂದು ಹಿಂಸೆ ಕೊಡುತ್ತಿದ್ದಾರಂತೆ.

ಅರ್ಜುನ್ ಆ ನಂಬರ್ ಅನ್ನು ಕಳೆದ 12 ವರ್ಷಗಳಿಂದ ಬಳಸುತ್ತಿದ್ದು, ಈ ಕರೆಗಳಿಂದ ತನ್ನ ಬ್ಯಸಿನೆಸ್ ಗೆ ಹಾಗೂ ವೈಯಕ್ತಿಕ ಬದುಕಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನು ತಿಳಿದ ಸನ್ನಿ ಲಿಯೋನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಆ ವ್ಯಕ್ತಿಗೆ ಬಹಿರಂಗವಾಗಿ ಸಾರಿ ಕೇಳಿದ್ದಾರೆ. ಮತ್ತೊಮ್ಮೆ ಇಂತಹ ತಪ್ಪುಗಳು ತಮ್ಮ ಸಿನಿಮಾಗಳಲ್ಲಿ ನಡೆಯದಂತೆ ಮುನ್ನಚ್ಚರಿಕೆ ವಹಿಸುತ್ತೇನೆ ಅಂದಿದ್ದಾರೆ.

ಈ ತರಹದ ಕೇಸ್​​​​​​​ಗಳು ಇದೇ ಮೊದಲೇನಲ್ಲ, ಹಿಂದೆ ಗಜಿನಿ ಸಿನಿಮಾದಲ್ಲಿಯೂ ಅಮಿರ್​ಖಾನ್​ ಬೆಂಗಳೂರಿನ ಉದ್ಯಮಿಯ ನಂಬರ್ ಬಳಸಿದ್ದರು. ಅದು ಕೂಡ ವಿವಾದಕ್ಕೆ ಗುರಿಯಾಗಿತ್ತು.

RELATED ARTICLES

Related Articles

TRENDING ARTICLES