Thursday, December 26, 2024

ಇಂಥಾ ವಿಚಿತ್ರ ಮ್ಯಾರೇಜ್​ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ, ನೋಡಿಲ್ಲ..!

ಲೆಕ್ಕವಿಲ್ಲದಷ್ಟು ಲವ್ ಸ್ಟೋರಿಗಳನ್ನು, ಮ್ಯಾರೇಜ್​ ಸ್ಟೋರಿಗಳನ್ನು ಕೇಳಿರ್ತೀರಿ. ಬಹುಶಃ ಇಂಥಾ ಒಂದು ಮ್ಯಾರೇಜ್​ ಸ್ಟೋರಿಯನ್ನು ನೀವು ಎಲ್ಲೂ ಕೇಳಿರಲ್ಲ..! ಇದು ಕಂಡು ಕೇಳರಿಯದ ವಿಚಿತ್ರ ಮ್ಯಾರೇಜ್​ ಸ್ಟೋರಿ..!
ಇಂಥಾದ್ದೊಂದು ಮದುವೆ ನಡೆದಿರೋದು ಇಂಗ್ಲೆಂಡ್​​​ನಲ್ಲಿ. ಆಕೆಯ ಹೆಸ್ರು ಎಲಿಜಬೆತ್​ ಹೋಡ್​​ ಅಂತ. ಒಂದಲ್ಲ, ಎರಡಲ್ಲ ನಾಲ್ಕು ಎಂಗೇಜ್ಮೆಂಟ್​​ಗಳು ಮುರಿದುಬಿದ್ದಿದ್ದರಿಂದ ಆಕೆ ಸಿಕ್ಕಾಪಟ್ಟೆ ನೊಂದು ಬಿಟ್ಟಿದ್ದಾರೆ..! ಎಲ್ಲಾ ನಿಶ್ಚಿತಾರ್ಥಗಳು ಬ್ರೇಕ್​ಅಪ್ ಆಗಿದ್ದರಿಂದ ಯಾವ ಪುರುಷರ ಸಂಬಂಧವೇ ಬೇಡ ಅಂತ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ..! ಪುರುಷರನ್ನೇ ಯಾಕೆ ಮದ್ವೆಯಾಗ್ಬೇಕು..? ನಾನಿನ್ನೂ ಪುರುಷರ ಜೊತೆ ಎಂಗೇಜ್ ಆಗಲ್ಲ ಅಂತ ನಿರ್ಧರಿಸಿದ ಆಕೆ ತಾನು ಸಾಕಿದ ನಾಯಿಯನ್ನೇ ಮದ್ವೆಯಾಗಿದ್ದಾರೆ..!
ಹೌದು, ನಾಲ್ಕು ಎಂಗೇಜ್ಮೆಂಟ್​​ಗಳು ಮುರಿದುಬಿದ್ದಿರುವುದರಿಂದ ಪುರುಷರೊಂದಿಗಿನ ಸಂಬಂಧವೇ ಬೇಡ ಅಂತ ಬೇಸತ್ತು ಎಲಿಜಬೆತ್​ ಹೋಡ್​ ತನ್ನ ಸಾಕು ನಾಯಿ ಲೋಗನ್​​ನನ್ನು ವಿವಾಹವಾಗಿದ್ದಾರೆ..! ಐಟಿವಿಯ ‘ದಿಸ್​ ಮಾರ್ನಿಂಗ್’ ಅನ್ನೋ ಶೋನಲ್ಲಿ 49 ವರ್ಷದ ಎಲಿಜಬೆತ್​ ಹೋಡ್​ ತನ್ನ ಮುದ್ದಿನ ನಾಯಿ ಲೋಗನ್​​ನನ್ನು ವರಿಸಿದ್ದಾರೆ. ಸದ್ಯ ಎಲ್ಲಾ ಕಡೆ ಇವರ ಮದ್ವೆಯದ್ದೇ ಮಾತು.. ಈ ವಿಚಿತ್ರ ಮ್ಯಾರೇಜ್​ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಜೊತೆಗೆ ಬಹಳಷ್ಟು ಟ್ರೋಲ್​ಗಳು ಕೂಡ ಆಗುತ್ತಿವೆ.

RELATED ARTICLES

Related Articles

TRENDING ARTICLES