Sunday, October 27, 2024

ಉಪ ಚುನಾವಣಾ ಅಖಾಡಕ್ಕೆ ಉಪೇಂದ್ರ..!

ರಿಯಲ್​ ಸ್ಟಾರ್​ ಉಪೇಂದ್ರ ಪ್ರಜಾಕೀಯ ಕಲ್ಪನೆ ಮೂಲಕ ರಾಜಕೀಯದ ಬದಲಾಗಿ ಪ್ರಜಾಪ್ರಭುತ್ವದಲ್ಲಿ ಹೊಸ ಪರಿ ಭಾಷೆ ಬರೆಯಲು ರೆಡಿಯಾಗಿರುವ ವಿಷಯ ಎಲ್ರಿಗೂ ಗೊತ್ತೇ ಇದೆ. ‘ಉಪ್ಪಿಯ ಉತ್ತಮ ಪ್ರಜಾಕೀಯ ಪಕ್ಷ’ (UPP) ಕಲಿಗಳು ಲೋಕ ಸಮರದಲ್ಲಿ ಸ್ಪರ್ಧಿಸುವ ಮೂಲಕ ಸಕ್ರಿಯ ‘ಪ್ರಜಾಕಾರಣ’ಕ್ಕೆ ಧುಮುಕಿದ್ದರು.
ಇದೀಗ ರಾಜ್ಯದಲ್ಲಿ ನಡೆಯುಲಿರುವ ವಿಧಾನಸಭಾ ಉಪ ಚುನಾವಣೆಗೆ ರೆಡಿಯಾಗಿದ್ದಾರೆ ‘ಬುದ್ಧಿವಂತ’ & ಟೀಮ್​. ಉಪ ಚುನಾವಣೆ ನಡೆಯಲಿರುವ 17 ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಯುಪಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉಪೇಂದ್ರ ತೀರ್ಮಾನಿಸಿದ್ದಾರೆ. ಟ್ವೀಟ್​ ಮೂಲಕ ಉಪ್ಪಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
”ನಮ್ಮ ಕರ್ನಾಟಕದಲ್ಲಿ ಸಂಪೂರ್ಣ ಪ್ರಜಾಪ್ರಭುತ್ವ ತರಲು ಈಗಿನ ಸ್ಥಿತಿಯಲ್ಲಿ ಇಷ್ಟು ಸ್ಥಾನ ಸಾಕು, ರಾಜಕೀಯ ಅಳಿಸಲು, ಅಧಿಕಾರ ನಿಮಗೆ ನೀಡಲು, ನೀವು ಹೇಳಿದಂತೆ ಕೇಳುವ 17 ಕಾರ್ಮಿಕರು ಸಿದ್ಧರಾಗುತ್ತೇವೆ, ಪ್ರಜಾಕೀಯ ಅರಳಿಸಲು ನೀವು ಸಿದ್ಧರಾಗುತ್ತೀರಾ” ?? ಅಂತ ಟ್ವೀಟ್ ಮಾಡಿರುವ ಉಪೇಂದ್ರ 17 ಕ್ಷೇತ್ರಗಳ ಪಟ್ಟಿಯನ್ನು ಕೂಡ ತಮ್ಮ ಟ್ವೀಟ್​ ಜೊತೆ ಅಟ್ಯಾಚ್​ ಮಾಡಿದ್ದಾರೆ.
ಗೋಕಾಕ್, ಕಾಗವಾಡ, ಅಥಣಿ, ಮಸ್ಕಿ, ವಿಜಯನಗರ, ಯಲ್ಲಾಪುರ, ರಾಣೆಬೆನ್ನೂರು, ಹಿರೆಕೇರೂರು, ಹುಣಸೂರು, ಕೆ.ಆರ್​ ಪೇಟೆ, ಚಿಕ್ಕಾಬಳ್ಳಾಪುರ, ಹೊಸಕೋಟೆ, ಆರ್​ ಆರ್​ ನಗರ, ಶಿವಾಜಿ ನಗರ, ಕೆ.ಆರ್​ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ ವಿಧಾಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯ ಬೇಕಿದೆ.

RELATED ARTICLES

Related Articles

TRENDING ARTICLES