Thursday, November 21, 2024

ಕೊಹ್ಲಿ -ರೋಹಿತ್​ ಮುನಿಸಿಗಿಂತ ಮ್ಯಾಚ್​ ಗೆಲ್ಲೋದು ಮುಖ್ಯ : ಕಪಿಲ್​ ದೇವ್ ಹೀಗಂದಿದ್ದೇಕೆ?

ಟೀ ಇಂಡಿಯಾ ಇಡೀ ವಿಶ್ವ ಕ್ರಿಕೆಟನ್ನು ಆಳ್ತಿದೆ..! ಲೆಕ್ಕವಿಲ್ಲದಷ್ಟು ದಿಗ್ಗಜರನ್ನು ವಿಶ್ವ ಕ್ರಿಕೆಟ್​ಗೆ ಪರಿಚಯಿಸಿದ್ದು ಟೀಮ್ ಇಂಡಿಯಾವೇ..! ಇಂದು ಕೂಡ ಘಟಾನುಘಟಿ, ವಿಶ್ವ ಶ್ರೇಷ್ಠ ಕ್ರಿಕೆಟಿಗರಿರುವುದು ಭಾರತದಲ್ಲೇ..! ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಯೇ ವಿಶ್ವದ ನಂಬರ್ 1 ಬ್ಯಾಟ್ಸ್​​ಮನ್​, ಉಪ ನಾಯಕ ರೋಹಿತ್ ಶರ್ಮಾರೇ ನಂಬರ್ 2..! ಬೌಲಿಂಗ್​ನಲ್ಲೂ ನಮ್ ಟೀಮ್ ಇಂಡಿಯಾದ ವೇಗಿ ಜಸ್​​ಪ್ರೀತ್ ಬುಮ್ರಾರೇ ಫಸ್ಟ್..!

ಹೀಗೆ ಭಾರತ ಕ್ರಿಕೆಟ್​ ವಿಶ್ವ ಮಟ್ಟದಲ್ಲಿ ಯಶಸ್ಸಿನ ಶಿಖರದ ತುತ್ತ ತುದಿಯಲ್ಲಿದೆ. ಆದ್ರೆ, ಟೀಮ್ ಇಂಡಿಯಾದ ಕ್ಯಾಪ್ಟನ್ ಕೊಹ್ಲಿ ಹಾಗೂ ವೈಸ್​ ಕ್ಯಾಪ್ಟನ್ ಶರ್ಮಾ ನಡುವೆ ಕೋಲ್ಡ್​ವಾರ್ ನಡೀತಾ ಇದೆ ಅನ್ನೋ ಗುಸುಗುಸು ಚರ್ಚೆಯೊಂದೇ ಬೇಜಾರಿನ ವಿಷಯ..! ಈ ಇಬ್ಬರು ಸ್ಟಾರ್​ ಆಟಗಾರರ ನಡುವಿನ ಮುನಿಸು ಟೀಮ್ ಇಂಡಿಯಾದ ಮೇಲೆ ಪ್ರಭಾವ ಬೀರುತ್ತಾ ಅನ್ನೋ ಆತಂಕ..!
ಈ ಬಗ್ಗೆ ಮೊನ್ನೆ ಮೊನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ವಿರಾಟ್​ ಕೊಹ್ಲಿ, ನಮ್ಮ ನಡುವೆ ಏನೂ ಇಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ರು. ಆದ್ರೆ, ನಿನ್ನೆ ರೋಹಿತ್ ಶರ್ಮಾ ‘ನಾನು ತಂಡಕ್ಕೋಸ್ಕರ ಮಾತ್ರ ಫೀಲ್ಡ್​ಗೆ ಇಳಿಯಲ್ಲ. ಇಡೀ ದೇಶವನ್ನು ಪ್ರತಿನಿಧಿಸಲು ಇಳಿಯುತ್ತೇನೆ’ ಅಂತ ಮಾಡಿದ್ದ ಟ್ವೀಟ್​ ಮತ್ತೆ ಹತ್ತಾರು ಚರ್ಚೆಗೆ ಕಾರಣವಾಗಿದೆ.
ಕೊಹ್ಲಿ – ರೋಹಿತ್ ನಡುವೆ ಕೋಲ್ಡ್​ವಾರ್ ನಡೀತಾ ಇದೆ ಅನ್ನೋ ಮಾತುಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಚೊಚ್ಚಲ ವರ್ಲ್ಡ್​ಕಪ್ ತಂದುಕೊಟ್ಟಿದ್ದ ಕ್ಯಾಪ್ಟನ್ ಕಪೀಲ್ ದೇವ್​ ಪ್ರತಿಕ್ರಿಯಿಸಿದ್ದಾರೆ. ‘ಕೊಹ್ಲಿ, ರೋಹಿತ್ ನಡುವೆ ಯಾವ್ದೇ ಜಗಳವಿರಬಹುದು. ಅದು ಕ್ರಿಕೆಟ್​ ಫೀಲ್ಡ್​ನಿಂದ ಆಚೆಗಿರ್ಬೇಕು. ಅವರಿಬ್ಬರ ನಡ್ವೆ ಕ್ರಿಡಾ ಬದ್ಧತೆ ಎಲ್ಲಿ ತನಕ ಇರುತ್ತೋ, ಅಲ್ಲಿವರೆಗೂ ಇನ್ನುಳಿದ ವಿಚಾರಗಳು ಅಪ್ರಸ್ತುತ. ಫೀಲ್ಡ್​ನಲ್ಲಿ ಒಂದೇ ಗುರಿಗಾಗಿ ಆಡಿ, ಮ್ಯಾಚ್​​ ಹೇಗೆ ಗೆಲ್ತೀರಿ ಅನ್ನೋದಷ್ಟೇ ಮುಖ್ಯ’ ಅಂತ ಕಪಿಲ್​ ದೇವ್​ ಹೇಳಿದ್ದಾರೆ.

RELATED ARTICLES

Related Articles

TRENDING ARTICLES