ಬೆಂಗಳೂರು : ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಭಾಸ್ಕರ್ ರಾವ್ರವರನ್ನು ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕಮಾಡಲಾಗಿದೆ.
ಹಿಂದಿನ ಮೈತ್ರಿ ಸರ್ಕಾರ ಅಲೋಕ್ ಕುಮಾರ್ರನ್ನು ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತ್ತು. ಇದೀಗ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಅಲೋಕ್ ಕುಮಾರ್ ಅವರನ್ನು ಕೆಎಸ್ಆರ್ಪಿ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ. ಭಾಸ್ಕರ ರಾವ್ ಅವರನ್ನು ನೂತನ ಕಮಿಷನರ್ ಆಗಿ ನೇಮಿಸಿ ಆದೇಶ ಹೊರಡಿಸಿದೆ.
ಇನ್ನುಳಿದಂತೆ ಅಗ್ನಿಶಾಮಕ ಸೇವೆಯ ಐಜಿಪಿ ಉಮೇಶ್ ಕುಮಾರ್, ಆಡಳಿತ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್, ಡಿಐಜಿಪಿ ಮತ್ತು ಜಂಟಿ ಆಯುಕ್ತ (ಬೆಂ.ಪಶ್ಚಿಮ) ಡಾ. ಬಿ.ಆರ್ ರವಿಕಾಂತೇ ಗೌಡ, ಉಡುಪಿ ಕರಾವಳಿ ಭದ್ರತೆ ಎಸ್ಪಿ ಆರ್.ಚೇತನ್, ಕೇಂದ್ರ ಡಿಸಿಪಿ ಡಿ.ದೇವರಾಜ್, ಗುಪ್ತಚರ ಇಲಾಖೆ ಡಿಸಿಪಿ ಡಾ.ಎಂ ಅಶ್ವಿನಿಯವರನ್ನು ಸಹ ವರ್ಗಾವಣೆ ಮಾಡಲಾಗಿದೆ.
ಇನ್ನು ಇಂದು ಮಧ್ಯಾಹ್ನವಷ್ಟೇ ಈ ವರ್ಗಾವಣೆಗಳನ್ನು ಮಾಡಿದ್ದ ಸರ್ಕಾರ ಉಮೇಶ್ ಕುಮಾರ್ ಮತ್ತು ರವಿಕಾಂತೇ ಗೌಡ ಅವರ ವರ್ಗಾವಣೆಯನ್ನು ರದ್ದು ಮಾಡಿದೆ. ಉಮೇಶ್ ಕುಮಾರ್ ಅವರನ್ನು ಹಿಂದಿದ್ದ ಹುದ್ದೆಯಲ್ಲೇ ಮುಂದುವರೆಯುವಂತೆ ಸೂಚಿಸಿದೆ. ರವಿಕಾಂತೇಗೌಡ ಅವರನ್ನು ಡಿಜಿಪಿ ಕಚೇರಿಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವಂತೆ ಹೇಳಿದೆ.