Monday, November 25, 2024

IMA ವಂಚಕ ಮನ್ಸೂರ್ ಅಲಿಖಾನ್ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಬೆಂಗಳೂರು: IMA ಬಹುಕೋಟಿ ವಂಚನೆಯ ಆರೋಪಿ ಮನ್ಸೂರ್ ಅಲಿಖಾನ್​ಗೆ  ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮನ್ಸೂರುರವರು ಪರಪ್ಪನ ಅಗ್ರಹಾರ ಕೇಂದ್ರಕಾರಾಗೃಹಕ್ಕೆ ಶಿಫ್ಟ್ ಆಗಲಿದ್ದಾರೆ.
ಹೂಡಿಕೆದಾರರಿಂದ ಸಾವಿರಾರು ಕೋಟಿ ರುಪಾಯಿ ಹಣ ಪಡೆದು ವಂಚಿಸಿ IMA ದೊರೆ ಮನ್ಸೂರು ಅಲಿಖಾನ್ ದುಬೈಗೆ ಪರಾರಿಯಾಗಿದ್ದರು. ಹೂಡಿಕೆದಾರರು ಮನ್ಸೂರು ವಿರುದ್ಧ ಸಾಲು ಸಾಲು ದೂರು ದಾಖಲಿಸಿದ್ದರು.ಈ ಪ್ರಕರಣವನ್ನು ಕೈಗೆತ್ತಿಕೊಂಡ ಎಸ್ಐಟಿ ಹಾಗೂ ಜಾರಿ ನಿರ್ದೇಶನಾಲಯ ದುಬೈನಿಂದ ಮನ್ಸೂರು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿತು. ಬಳಿಕ ಜಾರಿ ನಿರ್ದೇಶನಾಲಯ ಮನ್ಸೂರ್ ಅವರ ವಿಚಾರಣೆಯನ್ನು ನಡೆಸಿತ್ತು. ಇದೀಗ ED ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇವತ್ತು ಅಧಿಕಾರಿಗಳು ಮನ್ಸೂರ್ ಅವರನ್ನು ಸಿಟಿ ಸಿವಿಲ್ ಕೋರ್ಟ್​ಗೆ ಹಾಜರುಪಡಿಸಿದ್ರು. ಈ ವೇಳೆ ಕೋರ್ಟ್ ಮನ್ಸೂರ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಜಯದೇವ ಆಸ್ಪತ್ರೆಯಲ್ಲಿ ಮನ್ಸೂರ್ ಆರೋಗ್ಯ ತಪಾಸಣೆ ನಡೆಯಲಿದ್ದು, ಬಳಿಕ ಅಲ್ಲಿಂದ ಪರಪ್ಪನ ಅಗ್ರಹಾರ ಕೇಂದ್ರಕಾರಾಗೃಹಕ್ಕೆ ರವಾನಿಸಲಾಗುತ್ತೆ.

RELATED ARTICLES

Related Articles

TRENDING ARTICLES