ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪನವರು ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಯಶಸ್ವಿ ಆದ್ರು. ಆದ್ರೆ, ಇದೀಗ ಶಾಸಕರಿಗೆ ಸಚಿವ ಸ್ಥಾನ ಹಂಚುವುದು ಬಿ.ಎಸ್ವೈಗೆ ದೊಡ್ಡ ತಲೆನೋವಾಗಿದೆ.
ಶ್ರೀರಾಮುಲು, ಮಾಧುಸ್ವಾಮಿ, ಉಮೇಶ್ ಕತ್ತಿ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಆರ್. ಅಶೋಕ್, ಡಾ. ಅಶ್ವತ್ಥ್ ನಾರಾಯಣ, ಬಸವರಾಜ ಬೊಮ್ಮಾಯಿ, ಬಸವರಾಜ್ ಪಾಟೀಲ್ ಯತ್ನಾಳ್ ಹೆಚ್. ನಾಗೇಶ್, ಸಿ.ಟಿ.ರವಿ, ರೇಣುಕಾಚಾರ್ಯ ಸೇರಿದಂತೆ ಸಚಿವರಾಗಲು ಸಚಿವರ ದಂಡೇ ಇದೆ. ಹಾಗಾಗಿ ಬಿಎಸ್ವೈ ಸಚಿವ ಸ್ಥಾನಕ್ಕೆ 45 ಶಾಸಕರ ಪಟ್ಟಿ ತಯಾರಿಸಿದ್ದು ಶನಿವಾರ ಅಥವಾ ಆ ಆಗಸ್ಟ್ 5ಕ್ಕೆ ಯಡಿಯೂರಪ್ಪನವರು ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ನೊಂದಿಗೆ ಮಾತುಕತೆ ಬಳಿಕ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು ಅನ್ನೋದನ್ನ ಅಂತಿಮಗೊಳಿಸಲಿದ್ದಾರೆ. ಇನ್ನು, ಹೈಕಮಾಂಡ್ ಒಪ್ಪಿದ್ರೆ ಶ್ರೀರಾಮುಲು ಅವರಿಗೆ ಡಿ.ಸಿ.ಎಂ ಸ್ಥಾನ ನೀಡುವ ಎಲ್ಲಾ ಸಾಧ್ಯತೆಗಳಿವೆ. ಆರಂಭದಲ್ಲಿ 10 ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು ಪಕ್ಷೇತರ, ಅತೃಪ್ತರ ರಾಜೀನಾಮೆ ವಿಚಾರ ಬಗೆಹರಿದ ಬಳಿಕ ಮತ್ತೊಂದು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ಸಿಎಂ ನಿರ್ಧರಿಸಿದ್ದಾರೆ.