Sunday, October 27, 2024

ರಾಜ್ಯಪಾಲರು ಡೆಡ್​ಲೈನ್​ ನೀಡಿದ್ರೂ ವಿಶ್ವಾಸ ಮತಯಾಚನೆ ಆಗ್ಲೇ ಇಲ್ಲ..!

ಬೆಂಗಳೂರು : ಇಡೀ ದೇಶದ ಗಮನ ಸೆಳೆದಿದೆ ರಾಜ್ಯ ರಾಜಕಾರಣ. ದೋಸ್ತಿ ಸರ್ಕಾರದ ವಿಶ್ವಾಸ ಮತಯಾಚನೆ ಪರೀಕ್ಷೆ ಕುತೂಹಲಕ್ಕೆ ಇಂದು ಕೂಡ ತೆರೆ ಬಿದ್ದಿಲ್ಲ.
ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತಯಾಚನೆ ಮಾಡುವಂತೆ ರಾಜ್ಯಪಾಲ ವಜೂಭಾಯ್ ವಾಲಾರವರು ಸಿಎಂ ಕುಮಾರಸ್ವಾಮಿಯವ್ರಿಗೆ ನಿನ್ನೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ವಿಶ್ವಾಸ ಮತಯಾಚನೆ ಆಗುವ ನಿರೀಕ್ಷೆ ಇತ್ತು. ಗುರುವಾರ (ನಿನ್ನೆ) ದಂತೆಯೇ ಇಂದು ಸಹ ದೋಸ್ತಿ ನಾಯಕರು ಚರ್ಚೆಯ ನೆಪದಲ್ಲಿ ಮಾಡಿದ ಗೇಮ್​ಪ್ಲಾನ್ ಯಶ ಕಂಡಿದೆ. ಮಧ್ಯಾಹ್ನ ರಾಜ್ಯಪಾಲರು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚಿಸಿ ಅಂತ ಮತ್ತೆ ಡೆಡ್​ಲೈನ್​ ನೀಡಿದ್ರು. ಆದರೆ ಅದಕ್ಕೂ ಬಗ್ಗದ ದೋಸ್ತಿ ನಾಯಕರು ಮತ್ತೆ ಚರ್ಚೆಯಲ್ಲೇ ಕಾಲ ಕಳೆದರು. ಇಂದೇ ವಿಶ್ವಾಸ ಸಾಬೀತುಪಡಿಸುವಂತೆ ಬಿಜೆಪಿ ಶಾಸಕರು ಪಟ್ಟು ಹಿಡಿದರೂ ದೋಸ್ತಿ ಜಗ್ಗಲಿಲ್ಲ. ರಾತ್ರಿ 8 ಗಂಟೆವರೆಗೆ ಕಲಾಪ ನಡೆದರೂ ವಿಶ್ವಾಸ ಮತಯಾಚನೆ ಆಗಲೇ ಇಲ್ಲ. ಕೊನೆಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಸೋಮವಾರಕ್ಕೆ ಕಲಾಪ ಮುಂದೂಡಿದ್ದಾರೆ.

RELATED ARTICLES

Related Articles

TRENDING ARTICLES