Sunday, October 27, 2024

ಅತೃಪ್ತರಿಗೆ ‘ಸುಪ್ರೀಂ’ ರಿಲೀಫ್​ – ಶಾಸಕರ ರಾಜೀನಾಮೆ ಕುರಿತ ನಿರ್ಧಾರ ಸ್ಪೀಕರ್​​​ರದ್ದೇ..!

ನವದೆಹಲಿ : ಕರ್ನಾಟಕ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ‘ಸುಪ್ರೀಂ’ ಆದೇಶದಿಂದ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ತನ್ನಆದೇಶ ಪ್ರಕಟಿಸಿದ್ದು, ಸ್ಪೀಕರ್​ ಕಾಲಮಿತಿಯೊಳಗೆ ಅತೃಪ್ತ ಶಾಸಕ ರಾಜೀನಾಮೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಬೇಕು ಅಂತ ನಿರ್ದೇಶಿಸಿದೆ.
ಇನ್ನು ನಾಳೆ ಸಿಎಂ ವಿಶ್ವಾಸ ಮತಯಾಚನೆ ಮಾಡಲಿದ್ದು, ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗಲೇ ಬೇಕೆಂದು ಒತ್ತಾಯಿಸುವಂತಿಲ್ಲ. ಅಧಿವೇಶನಕ್ಕೆ ಹಾಜರಾಗುವುದು, ಬಿಡುವುದು ಶಾಸಕರಿಗೆ ಬಿಟ್ಟಿದ್ದು ಅಂತ ಕೋರ್ಟ್ ಹೇಳಿದೆ.
ಆದೇಶ ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ರವರು, ”ಸಂವಿಧಾನದ ಸಮತೋಲನ ಅಗತ್ಯ. ಶಾಸಕರ ರಾಜೀನಾಮೆಗಳ ಬಗ್ಗೆ ಸ್ಪೀಕರೇ ನಿರ್ಧರಿಸಲಿ” ಅಂದರು. ಅಂತೆಯೇ ಅತೃಪ್ತರಿಗೆ ವಿಪ್ ಅನ್ವಯವಾಗಲ್ಲ ಅಂತಲೂ ಸುಪ್ರೀಂ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅತೃಪ್ತರು ವಿಪ್​​ ಭೀತಿಯಿಂದ ಪಾರಾಗಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಇದು ಬ್ಯಾಡ್​ ನ್ಯೂಸ್ ಆಗಿದೆ. ಇನ್ನು ಸ್ಪೀಕರ್ ಅತೃಪ್ತರ ರಾಜೀನಾಮೆಯನ್ನು ಅಂಗೀಕರಿಸಿದ್ರು ಅಥವಾ ಅವರನ್ನು ಅನರ್ಹಗೊಳಿಸಿದ್ರೂ ಮೈತ್ರಿ ಪತನವಾದಂತೆ.
ಸದ್ಯ ಮೈತ್ರಿಗೆ 101 ಶಾಸಕರ ಬಲವಿದೆ. ಬಿಜೆಪಿಗೆ ತಮ್ಮ 105 ಶಾಸಕರು ಹಾಗೂ ಇಬ್ಬರು ಪಕ್ಷೇತರರ ಬಲ ಸೇರಿದಂತೆ 107 ಸದಸ್ಯರ ಬಲವಿದೆ. 

RELATED ARTICLES

Related Articles

TRENDING ARTICLES