Sunday, October 27, 2024

ಇಂದಿನಿಂದ ಅತೃಪ್ತ ಶಾಸಕರ ವಿಚಾರಣೆ

ಇಂದಿನಿಂದ ಅತೃಪ್ತ ಶಾಸಕರ ವಿಚಾರಣೆ ನಡೆಯಿಲಿದೆ. ಇವತ್ತು ಮೂವರು ಶಾಸಕರು ವಿಚಾರಣೆಗೆ ಹಾಜರಾಗಲು ಸ್ಪೀಕರ್​ ರಮೇಶ್​ ಕುಮಾರ್​ ಸಮಯ ನಿಗದಿ ಮಾಡಿದ್ದಾರೆ. ಕಾಂಗ್ರೆಸ್​ ಶಾಸಕರಾದ ಆನಂದಸಿಂಗ್, ಪ್ರತಾಪಗೌಡ ಪಾಟೀಲ್​ , ಹಾಗೇ ಜೆಡಿಎಸ್​ ಶಾಸಕ ನಾರಾಯಣ ಗೌಡ
ಅವರ ವಿಚಾರಣೆ ನಡೆಯಲಿದೆ. ರಾಜೀನಾಮೆ ಕ್ರಮಬದ್ಧವಾಗಿದ್ರೂ ಶಾಸಕರ ವಿಚಾರಣೆ ಮಾಡುವುದಾಗಿ ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ. ಕಾನೂನು ಬದ್ಧವಾಗಿ ಪ್ರಕ್ರಿಯೆ ನಡೆಸುವುದಾಗಿ ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದ್ದಾರೆ. ಆದ್ರೆ ರಾಜೀನಾಮೆ ನೀಡಿರುವ ಶಾಸಕರು ವಿಚಾರಣೆಗೆ ಹಾಜರಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

RELATED ARTICLES

Related Articles

TRENDING ARTICLES