ನವದೆಹಲಿ : ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಯಾರೂ ಊಹಿಸದ ಬೆಳವಣಿಗೆಗಳು ನಡೀತಾ ಇದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಇಕ್ಕಟ್ಟಿ ಸಿಲುಕಿದೆ. ಹೇಗಾದ್ರೂ ಮಾಡಿ ಸರ್ಕಾರ ಉಳಿಸಿಕೊಳ್ಳ ಬೇಕು ಅಂತ ದೋಸ್ತಿ ನಾಯಕರು ಭಾರಿ ಸರ್ಕಸ್ ನಡೆಸ್ತಾ ಇದ್ದಾರೆ. ಹಾಲಿ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತರಿಗೆ ಮಂತ್ರಿಗಿರಿ ನೀಡಿ ಸಮಾಧಾನ ಪಡಿಸಲು ಸಾಥ್ ನೀಡುತ್ತಿದ್ದಾರೆ.
ಇನ್ನು ರಾಜ್ಯ ರಾಜಕಾರಣದಲ್ಲಿನ ಈ ಬೆಳವಣಿಗೆಗಳಿಗೆ ಬಿಜೆಪಿಯೇ ಕಾರಣ ಎನ್ನೋದು ‘ದೋಸ್ತಿ’ ಆರೋಪ. ಆದರೆ, ಬಿಜೆಪಿ ಈ ಬೆಳವಣಿಗಳಿಗೆ ತನಗೂ ಯಾವ್ದೇ ಸಂಬಂಧವಿಲ್ಲ ಅಂತ ಹೇಳ್ತಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ‘ಕರ್ನಾಟಕದ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ. ಶಾಸಕರ ಕುದುರೆ ವ್ಯಾಪಾರದಲ್ಲಿ ಬಿಜೆಪಿ ಭಾಗಿಯಾಗಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ : ರಾಜನಾಥ್ ಸಿಂಗ್
TRENDING ARTICLES