ಬೆಂಗಳೂರು: ರಾಜ್ಯ ರಾಜಕೀಯದಲ್ಲೀಗ ರಾಜೀನಾಮೆ ಪರ್ವ ಶುರುವಾಗಿದೆ. ಇಂದು 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ಸೇರಿದಂತೆ ಒಟ್ಟು 14 ಮಂದಿ ರಾಜೀನಾಮೆ ನೀಡಿದಂತಾಗಿದೆ. ಇದರಿಂದ ಮೈತ್ರಿ ಸರ್ಕಾರ ಆತಂಕದಲ್ಲಿ ಸಿಲುಕಿದೆ.
ಇಂದು ಬೆಳಗ್ಗೆ ಒಂದಿಷ್ಟು ಮಂದಿ ಶಾಸಕರು ರಾಜೀನಾಮೆ ನೀಡಲೆಂದು ಸ್ಪೀಕರ್ ಕಚೇರಿಗೆ ತೆರಳಿದ ವಿಷಯ ಗೊತ್ತಾಗ್ತಿದ್ದಂತೆ ಸಚಿವ ಡಿ.ಕೆ ಶಿವಕುಮಾರ್ ವಿಧಾನಸೌಧಕ್ಕೆ ಆಗಮಿಸಿದ್ರು. ಅಷ್ಟೇ ಅಲ್ಲದೆ ಮುನಿರತ್ನ ಅವರ ಕೈಯಲ್ಲಿದ್ದ ರಾಜೀನಾಮೆ ಪತ್ರವನ್ನು ತೆಗೆದುಕೊಂಡು ಹರಿದು ಹಾಕಿದ್ರು..!
ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಮೊಬೈಲ್ನಲ್ಲಿ ಸೆರೆ ಹಿಡಿದ್ರು. ಜೊತೆಗೆ ಆ ವಿಡಿಯೋ ದಾಖಲೆ ಸಹಿತ ಅವರು ಡಿಕೆಶಿ ವಿರುದ್ಧ ರಾಜ್ಯಪಾಲರಿಗೆ ದೂರನ್ನೂ ನೀಡಿದ್ದಾರೆ. ಇನ್ನು ಡಿಕೆಶಿ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಿಂದ ಮುನಿರತ್ನ ಅವರು ಮತ್ತೊಮ್ಮೆ ರಾಜೀನಾಮೆ ಪತ್ರವನ್ನು ತಂದು ಸಲ್ಲಿಸಿದ್ರು.