ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ನಲ್ಲಿ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರ, ಮಹಿಳೆಯರ ಸ್ಥಿತಿ ಬದಲಾಗದೆ ದೇಶದ ಸ್ಥಿತಿ ಬದಲಾಗಲ್ಲ ಎಂಬ ಸಂದೇಶವನ್ನು ಉಲ್ಲೇಖಿಸಿದ ಅವರು ನಾರಿ ನೀ ನಾರಾಯಣಿ ಎಂಬ ಸಂಸ್ಕೃತಿ ನಮ್ಮದು ಎಂದು ಉಚ್ಚರಿಸಿದ್ರು. ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂ. ಸಾಲ, ಲಿಂಗ ತಾರತಮ್ಯ ನಿವಾರಣೆಗೆ ಹೊಸ ಯೋಜನೆ, ಮಹಿಳಾ ಸ್ವಸಹಾಯ ಸಂಘದ ಒಬ್ಬ ಮಹಿಳೆಗೆ ಜನ್ಧನ್ ಅಂಕೌಂಟಿನಿಂದ 5000 ರೂ. ಸಾಲ, ಸ್ಟ್ಯಾಂಡ್ ಅಪ್ ಯೋಜನೆಯಡಿ SC/ST ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುವುದು.ಈ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗ್ತದೆ ಅಂತ ಭರವಸೆ ನೀಡಿದ್ರು.