ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಿದ್ದಾರೆ. ಇದು ಅವ್ರ ಚೊಚ್ಚಲ ಬಜೆಟ್. ದೇಶದ ಇತಿಹಾಸದಲ್ಲಿ ಬಜೆಟ್ ಮಂಡಿಸಿರುವ ಎರಡನೇ ಮಹಿಳೆ ಅನ್ನೋ ಕೀರ್ತಿಗೂ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ್ದರು. ಅವರ ಬಳಿಕ ಕೇಂದ್ರ ಬಜೆಟ್ ಮಂಡಿಸಿದ ಮಹಿಳೆ ಅನ್ನೋ ಕೀರ್ತಿಗೆ ನಿರ್ಮಲಾ ಸೀತಾರಾಮನ್ ಭಾಜನರಾಗಿದ್ದಾರೆ.
ಇನ್ನು ಭಾರತದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿಯವರಿಗೆ ಸಲ್ಲುತ್ತದೆ. ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ದೇಸಾಯಿ ಅವರು 10 ಬಜೆಟ್ಗಳನ್ನು ಮಂಡಿಸಿದ್ದರು..! ವಿಶೇಷವೆಂದರೆ, ದೇಸಾಯಿ ತಮ್ಮ ಹುಟ್ಟುಹಬ್ಬದಂದು ಎರಡು ಬಾರಿ ಬಜೆಟ್ ಮಂಡಿಸಿದ್ದರು. 1964 ಮತ್ತು 1968 ರ ಎರಡೂ ಬಜೆಟ್ಗಳನ್ನು ಬಜೆಟ್ ನಾಲ್ಕು ವರ್ಷಗಳಿಗೊಮ್ಮೆ ಬರುವ ಅವರ ಹುಟ್ಟುಹಬ್ಬ(29 ಫೆಬ್ರವರಿ)ದಿನದಂದು ಮಂಡಿಸಿದ್ದರು ಅನ್ನೋದನ್ನು ಈ ವೇಳೆ ಸ್ಮರಿಸಬಹುದು.