ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ 5 ವರ್ಷ ನಿದ್ದೆ ಮಾಡಿದ್ರು. ನಿದ್ದೆ ಮಾಡುವ ಸಿದ್ದರಾಮಯ್ಯ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ”ಮಾಜಿ ಸಿಎಂ ಸಿದ್ದರಾಮಯ್ಯ 5 ವರ್ಷ ನಿದ್ದೆ ಮಾಡಿದ್ರು. ನಿದ್ದೆ ಮಾಡುವ ಸಿದ್ದರಾಮಯ್ಯ ಅವರನ್ನ ಜನ ಮನೆಗೆ ಕಳುಹಿಸಿದ್ದಾರೆ. ಕೆಲಸಗಾರ ಮೋದಿಯವರನ್ನ ಜನರು ಗೆಲ್ಲಿಸಿದ್ದಾರೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ ಕೊಟ್ಟಿದ್ದೀವಿ ಅಂತಾರೆ. ಯಾವುದನ್ನೂ ಅವರು ತನ್ನ ಜೇಬಿನಿಂದ ಕೊಟ್ಟಿಲ್ಲ ಅಂತ ವಾಗ್ದಾಳಿ ನಡೆಸಿದ್ರು.
ಸಿದ್ದರಾಮಯ್ಯ 5 ವರ್ಷ ನಿದ್ದೆ ಮಾಡಿದ್ರು : ಈಶ್ವರಪ್ಪ
TRENDING ARTICLES