Friday, January 3, 2025

ಇಂಡೋ- ಆಸೀಸ್​ ಮ್ಯಾಚ್​ನಲ್ಲಿ ಮಲ್ಯ..!

ಲಂಡನ್: ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಣೆಗೆ ಮದ್ಯದ ದೊರೆ ವಿಜಯ್ ಮಲ್ಯ ಅವರೂ ತೆರಳಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ತಮ್ಮ ಕ್ರಿಕೆಟ್‌ ಕ್ರೇಜ್‌ ಕುಗ್ಗಿಲ್ಲ ಅನ್ನೋದನ್ನ  ತೋರಿಸಿದ್ದಾರೆ.

ಲಂಡನ್​ನ ಓವಲ್​ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವರ್ಲ್ಡ್​​ಕಪ್​ ಪಂದ್ಯ ವೀಕ್ಷಿಸಲು ಮಲ್ಯ ಅವರೂ ತೆರಳಿದ್ದಾರೆ.  ನಾನು ಕ್ರಿಕೆಟ್​ ವೀಕ್ಷಿಸೋಕೆ ಬಂದಿದ್ದೀನಿ ಅಂದಿರುವ ಮಲ್ಯ ನೇರ ಸ್ಟೇಡಿಯಂ ಒಳಗೆ ನಡೆದಿದ್ದಾರೆ.

ಕಿಂಗ್​ಫಿಶರ್​ ಏರ್​ಲೈನ್ಸ್​ ಮಾಲೀಕರಾಗಿದ್ದ ಮಲ್ಯ ಭಾರತದಲ್ಲಿ ವಿವಿಧ ಬ್ಯಾಂಕ್​ಗಳಿಗೆ 9000 ಕೋಟಿ ರೂಪಾಯಿ ವಂಚಿಸಿ ಲಂಡನ್​ಗೆ ಪರಾರಿಯಾಗಿದ್ದರು.

RELATED ARTICLES

Related Articles

TRENDING ARTICLES