ದೋಸ್ತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೋಪ ತಾಪ ಜಾಸ್ತಿಯಾಗಿದೆ. ಶಾಸಕ ರೋಷನ್ ಬೇಗ್ ಅವರು ಸಿದ್ದರಾಮಯ್ಯ ಸ್ಟೈಲ್ನಲ್ಲೇ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ನಾನೇ ಸಿಎಂ, ನಾನೇ ಸಿಎಂ ಅಂತಿದ್ರಲ್ವಾ? ಫಲಿತಾಂಶ ಬಂದ್ಮೇಲೆ ಏಕೆ ಸುಮ್ಮನಾದ್ರು? ಅಪ್ಪನಾಣೆ ಅವರು ಸಿಎಂ ಆಗಲ್ಲ ಅಂತಿದ್ರು, ಈಗ ಅವರೇ ಮುಖ್ಯಮಂತ್ರಿ ಅಂತಾರೆ ಅಂತ ಸಿದ್ದರಾಮಯ್ಯ ವಿರುದ್ಧ ಬೇಗ್ ವ್ಯಂಗ್ಯವಾಡಿದ್ದಾರೆ.
ತಮಗೆ ನೀಡಿರುವ ನೋಟಿಸ್ ಬಗ್ಗೆಯೂ ಕೆಂಡಾಮಂಡಲರಾಗಿರುವ ರೋಷನ್ ಬೇಗ್, ಮೊದಲು ಮಂಡ್ಯದಲ್ಲಿ ನಿಖಿಲ್ ಸೋಲಿಸಿದವರಿಗೆ, ತುಮಕೂರಲ್ಲಿ ದೇವೇಗೌಡರನ್ನು ಸೋಲಿಸಿದವರಿಗೆ ಮೊದಲು ನೋಟಿಸ್ ನೀಡಲಿ. ಕಾಂಗ್ರೆಸ್ ಪಕ್ಷದಲ್ಲಿ ಸತ್ಯಶೋಧನಾ ಸಮಿತಿ ಮಾಡಿರೋದೇ ದೊಡ್ಡ ಜೋಕ್. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫ್ಲಾಪ್ ಶೋ ಎಂದು ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಇದು ಸಿದ್ದರಾಮಯ್ಯ ಸ್ಟೈಲು ಕಣ್ರೀ – ‘ನಾನೇ ಸಿಎಂ, ನಾನೇ ಸಿಎಂ ಅಂತಿದ್ರಿ’..!
TRENDING ARTICLES