ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ್ರು ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಜೆಡಿಎಲ್ಪಿ ಸಭೆ ನಡೆಯಲಿದೆ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಜೆಪಿನಗರದ ನಿವಾಸದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಎಲ್ಲಾ ಜೆಡಿಎಸ್ ಶಾಸಕರು ಹಾಜರಿರಲಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡುವ ಸಾಧ್ಯತೆಗಳಿದ್ದು, ಪ್ರಮುಖವಾಗಿ ಪದೇ ಪದೇ ಮೈತ್ರಿ ಸರ್ಕಾರದಲ್ಲಿ ಉಟಾಂಗುತ್ತಿರುವ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆಯಾಗಲಿದೆ. ಸಚಿವ ಸಂಪುಟ ವಿಸ್ತರಿಸಿದ್ರೆ ಯಾರಿಗೆ ಸ್ಥಾನ ಕೊಡಬೇಕು? ತಮ್ಮ ಮುಂದಿನ ನಡೆ ಹೇಗಿರಬೇಕು. ಸ್ವ-ಪಕ್ಷದ ಶಾಸಕರ ನಡುವಿನ ಭಿನ್ನಾಭಿಪ್ರಾಯಗಳೇನು? ಹಾಗೂ ‘ಆಪರೇಷನ್ ಕಮಲ’ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಅಂತ ಹೇಳಲಾಗುತ್ತಿದೆ.
ಹೆಚ್ಡಿಡಿ, ಹೆಚ್ಡಿಕೆ ನೇತೃತ್ವದಲ್ಲಿ ಜೆಡಿಎಲ್ಪಿ ಸಭೆ – ಯಾವೆಲ್ಲಾ ವಿಷಯಗಳ ಚರ್ಚೆ ಆಗುತ್ತೆ?
TRENDING ARTICLES