ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಇದ್ದಕ್ಕಿದ್ದಂತೆ ಇಂಥಾ ಒಂದು ನಿರ್ಧಾರ ತೆಗೆದುಕೊಂಡು ಬಿಟ್ರಾ? ದಿಢೀರ್ ಅಂತ ರಮ್ಯಾ ಹೀಗೆ ಮಾಡಿ ಬಿಟ್ರಾ?
ಅರೆ ಏನಿದು? ರಮ್ಯಾ ಏನ್ ಮಾಡಿದ್ರು ಅಂತ ಕೇಳ್ತಿದ್ದೀರಾ..? ಹೌದು, ರಮ್ಯ ಇದ್ದಕ್ಕಿದ್ದಂತೆ ಟ್ಟಿಟರ್ ಖಾತೆಯನ್ನು ಡಿಲೀಟ್ ಮಾಡಿ ಬಿಟ್ಟಿದ್ದಾರೆ..! ಹೀಗಾಗಿ ಅವರು ಸೋಶಿಯಲ್ ಮೀಡಿಯಾ ಮುಂದಾಳತ್ವಕ್ಕೆ ಗುಡ್ ಬೈ ಹೇಳಿ ಬಿಟ್ರಾ ಅನ್ನೋ ಪ್ರಶ್ನೆ ಮೂಡ್ತಾ ಇದೆ.
ರಮ್ಯಾ ಅವರ ಟ್ವಿಟರ್ ಅಕೌಂಡ್ ಡಿಸ್ಪ್ಲೆ ಆಗ್ತಿಲ್ಲ. ಅಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಅನ್ನೋ ಅಡಿಬರಹ ಕೂಡ ಈಗ ಕಾಣಿಸ್ತಿಲ್ಲ..! ಎಲ್ಲಾ ಟ್ವೀಟ್ ಡಿಲೀಟ್ ಆಗಿದೆ. ಇದು ರಮ್ಯಾ ಅವರು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸಾರಥ್ಯವನ್ನು ಬಿಟ್ಟಿದ್ದಾರೆ ಅನ್ನುವಂತಿದೆ. ಈ ಬಗ್ಗೆ ಖಚಿತವಾಗಿಲ್ಲ. ಆದ್ರೆ, ಅವರ ಅಕೌಂಟ್ ಮಾತ್ರ ಡಿಲೀಟ್ ಆಗಿ ಬಿಟ್ಟಿದೆ..!
Divya Spandana tweets deleted, has she left Congress social media?
Read @ANI story | https://t.co/ONmJLaMLcG pic.twitter.com/UqjmRbmr6y
— ANI Digital (@ani_digital) June 1, 2019