ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಎರಡನೇ ಅವಧಿಯ ಸರ್ಕಾರವನ್ನು ರಚಿಸಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಹಾಗೂ 57 ಸಚಿವರು ಪ್ರಮಾಣವಚನ ಸ್ವೀಕರಿಸಿದ್ರು.
ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಈ ಬಾರಿ ಸಂಪುಟದಿಂದ ದೂರ ಉಳಿದಿದ್ದಾರೆ. ಮೋದಿ ನೇತೃತ್ವದ ಮೊದಲ ಅವಧಿ ಸರ್ಕಾರದಲ್ಲಿ ವಿದೇಶಾಂಗ ಖಾತೆಯನ್ನು ನಿಭಾಯಿಸಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಅವರೀಗ ವಿದಾಯದ ಭಾವನಾತ್ಮಕ ಟ್ವೀಟ್ ಅನ್ನು ಮಾಡಿದ್ದಾರೆ.
‘ನಾನು ನಿಮ್ಗೆ ಕೃತಜ್ಞಳಾಗಿದ್ದೇನೆ. ಸರ್ಕಾರ ಅದ್ಭುತವಾಗಿ ಮುನ್ನಡೆಯಲಿ’ ಅಂತ ವಿಶ್ ಮಾಡಿರೋ ಸುಷ್ಮಾ ಸ್ವರಾಜ್, ಭಾರತೀಯ, ಅನಿವಾಸಿ ಭಾರತೀಯರಿಗೆ 5 ವರ್ಷಗಳ ಕಾಲ ಸೇವೆ ಸಲ್ಲಿಸೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅವರು ವಿದೇಶದಲ್ಲಿರುವ ಭಾರತೀಯರ ಸಮಸ್ಯೆಗಳಿಗೆ, ಕಷ್ಟಗಳಿಗೆ ಸ್ಪಂದಿಸೋದಕ್ಕಂತ ಮೈಕ್ರೋ ಬ್ಲಾಗಿಂಗ್ ಸೈಟ್ ಅಳವಡಿಸಿಕೊಂಡಿದ್ದರು. ಈ ಮೂಲಕ ಅನಿವಾಸಿ ಭಾರತೀಯರ ಸಹಾಯಕ್ಕೆ ನಿಂತಿದನ್ನು ಈ ವೇಳೆ ಸ್ಮರಿಸಬಹುದು.
ಇನ್ನು ಯುಪಿಎ 10ವರ್ಷಗಳ ಅವಧಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಸೇವೆ ಸಲ್ಲಿಸಿದ್ರು. ಗುರುವಾರ ನರೇಂದ್ರ ಮೋದಿ ನೂತನ ಸಂಪುಟದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ರು.
ಸುಷ್ಮಾ ಸ್ವರಾಜ್ ವಿದಾಯದ ಟ್ವೀಟ್ನಲ್ಲಿ ಮೋದಿ ಬಗ್ಗೆ ಹೇಳಿದ್ದೇನು?
TRENDING ARTICLES