ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 553 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅದರಲ್ಲೂ ಬಿಜೆಪಿ ಬರೋಬ್ಬರಿ 303 ಸ್ಥಾನಗಳಲ್ಲಿ ಪ್ರಚಂಡ ಗೆಲುವನ್ನು ಕಂಡಿದೆ. ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಜಯಿಸಿದೆ. ಬಿಜೆಪಿಯ ಈ ಗೆಲುವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕವಿತೆ ಮೂಲಕ ವಿರೋಧಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ಬಣ್ಣದ ಕೋಮುವಾದಿಯನ್ನ ನಾನು ಎಂದೂ ಒಪ್ಪಲ್ಲ. ಪ್ರತಿಯೊಂದು ಧರ್ಮದಲ್ಲೂ ಸಹಿಷ್ಣತೆ, ಆಕ್ರಮಣಶೀಲತೆ ಇರುತ್ತೆ. ಆದ್ರೆ, ಬಂಗಾಳದಲ್ಲಿ ಬೆಳೆದ ನಾನು ಶಾಂತಿ ಪುನರುಜ್ಜೀವನದ ಸೇವಕಿ. ಧರ್ಮದ ಹೆಸ್ರಲ್ಲಿ ಆಕ್ರಮಣಶೀಲತೆ ನಡೆಸೋರನ್ನು ಎಂದೂ ಒಪ್ಪಲಾರೆ” ಅಂತ ಮಮತಾ ಕವಿತೆ ಮೂಲಕ ತಿಳಿಸಿದ್ದಾರೆ. ಈ ಕವಿತೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗುತ್ತಿದೆ.
ಹಿಂದೂ ಧರ್ಮದ ಆಚರಣೆಗೆ. ಶ್ರೀರಾಮ್ ಘೋಷಣೆಗೆ ಬಿಡಲ್ಲ ಅಂತ ನಮ್ ವಿರುದ್ಧ ಬಿಜೆಪಿ ಆರೋಪ ಮಾಡಿತ್ತು. ಹೀಗಾಗಿ ನಾವು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲೋಕೆ ಆಗಿಲ್ಲ ಅಂತಲೂ ದೀದಿ ಕವಿತೆ ಮೂಲಕ ಆರೋಪಿಸಿದ್ದಾರೆ.
I Do Not Agree pic.twitter.com/RFVjiunJQt
— Mamata Banerjee (@MamataOfficial) May 24, 2019
জরুরী!!! pic.twitter.com/8kNEOdBIOT
— Mamata Banerjee (@MamataOfficial) May 22, 2019