ಹಾಸನದಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಗೆದ್ದು 24 ಗಂಟೆ ಆಗುವಷ್ಟರಲ್ಲಿ ರಾಜೀನಾಮೆ ನೀಡಲು ಪ್ರಜ್ವಲ್ ಮುಂದಾಗಿರುವು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ತುಮಕೂರಿನಲ್ಲಿ ಸೋಲನುಭವಿಸಿರುವ ಹೆಚ್.ಡಿ ದೇವೇಗೌಡರಿಗಾಗಿ ಹಾಸನವನ್ನು ಬಿಟ್ಟು ಕೊಡಲು ಪ್ರಜ್ವಲ್ ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಇದಕ್ಕೂ ಮಿಗಿಲಾಗಿ ಪ್ರಜ್ವಲ್ ರಾಜೀನಾಮೆಗೆ ಮತ್ತೊಂದು ಕಾರಣ ಇದೆ ಅಂತ ಹೇಳಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ಅಫಿಡೆವಿಟ್ನಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ ಆರೋಪವಿದೆ. ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ, ಆಯೋಗದ ಸೂಚನೆಯಂತೆ ಜಿಲ್ಲಾಧಿಕಾರಿ ವರದಿಯನ್ನು ಸಲ್ಲಿಸಿದ್ದಾರೆ.
ಸುಳ್ಳು ಅಫಿಡವಿಟ್ ಸಲ್ಲಿಸಿದ್ದು ಸಾಬೀತಾದ್ರೆ ಪ್ರಜ್ವಲ್ ಅನರ್ಹ ಆಗ್ತಾರೆ. ಹಾಗಾದಲ್ಲಿ ಎರಡನೇ ಅತೀ ಹೆಚ್ಚು ಮತ ಪಡೆದವರಿಗೆ ಸಂಸದ ಸ್ಥಾನ ಸಿಗುತ್ತದೆ. ಈಗಲೇ ರಾಜೀನಾಮೆ ನೀಡಿದಲ್ಲಿ ಮರು ಚುನಾವಣೆ ನಡೆಯುತ್ತದೆ ಅನ್ನೋ ಲೆಕ್ಕಾಚಾರದಲ್ಲಿ ಪ್ರಜ್ವಲ್ ರಾಜೀನಾಮೆ ನೀಡುತ್ತಾರೆ. ಆಗ ದೇವೇಗೌಡ್ರು ಸ್ಪರ್ಧಿಸಿದ್ರೆ ಕ್ಷೇತ್ರ ಉಳಿಯುತ್ತದೆ ಅನ್ನೋ ಯೋಚನೆ ಪ್ರಜ್ವಲ್ ಮತ್ತು ಜೆಡಿಎಸ್ನದ್ದು.
ಪ್ರಜ್ವಲ್ ರಾಜೀನಾಮೆ ನೀಡುವ ಹಿಂದಿದೆಯಾ ಆ ಒಂದು ಕಾರಣ..?
TRENDING ARTICLES