Wednesday, January 22, 2025

ಮಂಡ್ಯದಲ್ಲಿ ಸುಮಲತಾ ಅಂಬರೀಶ್​ಗೆ ಭರ್ಜರಿ ಗೆಲುವು

ಮಂಡ್ಯ: ಇಡೀ ದೇಶದ ಗಮನ ಸೆಳೆದ ಮಂಡ್ಯ ರಣಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ವಿಜಯಪತಾಕೆ ಹಾರಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಲತಾ ಗೆಲುವಿನ ನಗೆ ಬೀರಿದ್ದಾರೆ. ಇದರೊಂದಿಗೆ ಸಿಎಂ ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಂಗವಾಗಿದೆ.

ಮೊಟ್ಟ ಮೊದಲ ಬಾರಿಗೆ ಮಂಡ್ಯ ಜನ ಪಕ್ಷೇತರ ಅಭ್ಯರ್ಥಿಯ ಕೈ ಹಿಡಿದಿದ್ದು, ಸುಮಲತಾ ಅವರು ಸಕ್ಕರೆ ನಾಡಿನ ಸಂಸದರಾಗಿ ಸಂಸತ್​ ಪ್ರವೇಶಿಸಲಿದ್ದಾರೆ. ಸುಮಲತಾ ಅವರ ಪರ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್​ ಸ್ಟಾರ್ ಯಶ್ ಕೂಡ ಪ್ರಚಾರ ಮಾಡಿದ್ದರು. ಇದು ಕೂಡ ಅವರ ಗೆಲುವಿಗೆ ಪ್ಲಸ್ ಆಗಿದೆ. ದರ್ಶನ್ ಮತ್ತು ಯಶ್​ ಅವರು ಸಮಲತಾ ಪರ ಪ್ರಚಾರ ಶುರು ಮಾಡಿದಲ್ಲಿಂದ ಸಿಎಂ ಕುಮಾರಸ್ವಾಮಿ ಸೇರಿದಂತೆ ಇಡೀ ಮೈತ್ರಿ ಪಡೆ ಕೆಂಡಾಮಂಡಲ ಆಗಿದ್ದನ್ನು ಈ ವೇಳೆ ಸ್ಮರಿಸಬಹುದು.

RELATED ARTICLES

Related Articles

TRENDING ARTICLES