Wednesday, January 22, 2025

ಅಗತ್ಯ ಬಿದ್ದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲು ರೆಡಿ ಅಂದ್ರು ಕಾಂಗ್ರೆಸ್ ಶಾಸಕ..!

ಬೆಂಗಳೂರು: ಎಕ್ಸಿಟ್​ ಪೋಲ್​ ಬಳಿಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಕೇಳಿಬಂದಿದೆ. ತಲ್ಲಣಗೊಂಡಿರೋ ದೋಸ್ತಿ ಪಕ್ಷಗಳಿಗೆ ಕೈ ಶಾಸಕ ರೋಷನ್​ ಬೇಗ್ ನೀಡಿರೋ ಹೇಳಿಕೆಯಿಂದ ಇನ್ನಷ್ಟು ಟೆನ್ಶನ್ ಆಗಿದೆ. ಅಗತ್ಯ ಬಿದ್ದಲ್ಲಿ ಬಿಜೆಪಿ ಜೊತೆಗೂ ಕೈಜೋಡಿಸಲು ರೆಡಿ ಅಂತ ಶಿವಾಜಿನಗರ ಕಾಂಗ್ರೆಸ್​ ಶಾಸಕ ರೋಷನ್​ ಬೇಗ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಖಾಸಗಿ ಉರ್ದು ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರೋಷನ್​ ಬೇಗ್​ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​ ಪಕ್ಷದ ಬಗ್ಗೆ ಅಸಮಾಧಾನ ತೋಡಿಕೊಂಡ ರೋಷನ್​ ಬೇಗ್​ ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ಪ್ರಚಾರಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಲೋಕ ಸಮರದಲ್ಲಿ ಕಾಂಗ್ರೆಸ್​ ಪಕ್ಷ ಕರ್ನಾಟಕದಲ್ಲಿ ಫ್ಲಾಪ್​ ಶೋ ನೀಡಿದೆ. ಎನ್​ಡಿಎ ಅಧಿಕಾರಕ್ಕೆ ಮರಳಿ ಬರುತ್ತೆ ಅನ್ನೋದು ನನಗೆ ಮೊದಲೇ ಗೊತ್ತಿತ್ತು” ಎಂದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್​ ಫ್ಲಾಪ್​ ಶೋ: “ಎಕ್ಸಿಟ್​ ಪೋಲ್​ ರಿಸಲ್ಟ್​ನಿಂದ ನನಗೇನು ಅಚ್ಚರಿಯಾಗಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ ಫ್ಲಾಪ್​ ಶೋ ನೀಡಿದೆ. ‘ಕೈ’ಗೆ​ ಒಳ್ಳೆಯ ರಿಸಲ್ಟ್​ ಬರುವುದಿಲ್ಲ ಅಂತಾ ಮೊದಲೇ ಅನ್ನಿಸಿತ್ತು. ಎನ್​ಡಿಎ ಸರ್ಕಾರ ಬರುತ್ತೆ ಎಂದು ನನ್ನ ಮನಸು ಹೇಳುತ್ತಿತ್ತು. ನಾನು ಮುಸಲ್ಮಾನ ಬಂಧುಗಳಲ್ಲಿ ಇದನ್ನೇ ಮನವಿ ಮಾಡುತ್ತೇನೆ. ಇನ್ನಾದ್ರೂ ಪರಿಸ್ಥಿತಿಯ ಜೊತೆ ಸ್ವಲ್ಪ ಹೊಂದಿಕೊಳ್ಳಲು ಕಲಿಯಿರಿ. ಅದು ಹಾಗಾಗಬಾರ್ದು, ಹೀಗಾಗಬಾರದು ಅನ್ನೋದನ್ನು ಬಿಡಿ. ಹಜ್​ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು ಸದಾನಂದಗೌಡ. ಬಿಜೆಪಿ ಜೊತೆ ಕೈಜೋಡಿಸುವದಾದ್ರೆ ಕೈ ಜೋಡಿಸೋಣ. ಒಂದೇ ಒಂದು ಪಕ್ಷ ನಂಬಿ ಕೂರುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಮುಸಲ್ಮಾನರ ಜೊತೆ ಏನಾಯ್ತು..? ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಒಂದೇ ಸೀಟ್​ ನೀಡಲಾಗಿದೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES