Wednesday, January 22, 2025

ರಾಜ್ಯ ಕಾಂಗ್ರೆಸ್ ಹೀನಾಯ ಸ್ಥಿತಿಗೆ ನಾಯಕರೇ ಕಾರಣ: ರೋಷನ್ ಬೇಗ್ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಹೀನಾಯ ಸ್ಥಿತಿಗೆ ತಲುಪಲು ನಾಯಕರೇ ಕಾರಣ ಅಂತ ಶಿವಾಜಿನಗರ ಕಾಂಗ್ರೆಸ್​ ಶಾಸಕ ರೋಷನ್ ಬೇಗ್​ ಹೇಳಿದ್ದಾರೆ. ಹಾಗೆಯೇ ಬಿಜೆಪಿಗೆ ಬೆಂಬಲ ನೀಡಿ ಎಂದು ಮುಸ್ಲಿಂ ಸಮುದಾಯಕ್ಕೆ ಬಹಿರಂಗವಾಗಿ ಮನವಿ ಮಾಡಿದ್ದಾರೆ.

“ನಮ್ಮಂತಹ ನಾಯಕರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಬಫೂನ್ ಆಗಿರುವ ವೇಣುಗೋಪಾಲ್​, ಸಿದ್ದರಾಮಯ್ಯ ಅವರ ಆಕ್ರಮಣ ನೀತಿ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರ ಫ್ಲಾಪ್​ ಶೋ ಇದೆಲ್ಲವೂ ರಾಜ್ಯದಲ್ಲಿ ಕಾಂಗ್ರೆಸ್​ ಹಿನ್ನಡೆಗೆ ಕಾರಣವಾಗ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಹೀನಾಯ ಸ್ಥಿತಿ ಬಂದಿದೆ” ಅಂತ ಹೇಳಿದ್ದಾರೆ.

“ಲೋಕಸಭೆ ಚುನಾವಣೆ ವೇಳೆ ಅಲ್ಪಸಂಖ್ಯಾತರಿಗೆ ಕೇವಲ ಒಂದು ಕ್ಷೇತ್ರ ನೀಡಲಾಗಿದೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ರಿಜ್ವಾನ್‌ ಅರ್ಷದ್​ಗೆ ಟಿಕೆಟ್ ನೀಡಲಾಗಿದೆ ಅಂತ ಅವರು ಬೆಂಗಳೂರಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್‌ ನಾಯಕರು ಮುಸ್ಲಿಂರನ್ನ ಹಸು ರೀತಿ ಬಳಸಿಕೊಂಡ್ರು. ಚುನಾವಣೆ ವೇಳೆ ಮಾತ್ರ ಮುಸ್ಲಿಂ ಸಮುದಾಯದವರು ನೆನಪಾಗ್ತಾರೆ. ರಾಮಲಿಂಗಾ ರೆಡ್ಡಿ, ನಮ್ಮಂಥ ನಾಯಕರನ್ನ ಕಡೆಗಣಿಸಿದ್ದಾರೆ. ಧರ್ಮ ಒಡೆದ ಫಲ ನಾವು ಈ ಸ್ಥಿತಿಗೆ ತಲುಪಿದ್ದೇವೆ” ಎಂದಿದ್ದಾರೆ.

RELATED ARTICLES

Related Articles

TRENDING ARTICLES