Monday, December 23, 2024

‘ಕೈಯಲ್ಲಿ ಕೋಳಿನೇ ಇಲ್ಲ, ಕಬಾಬ್ ಮಾಡಲು ಹೊರಟಿದ್ದಾರೆ ರೋಷನ್ ಬೇಗ್’..!

ಬೆಂಗಳೂರು: ಕೈಯಲ್ಲಿ ಕೋಳಿನೇ ಇಲ್ಲ, ಕಬಾಬ್ ಮಾಡಲು ಹೊರಟಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಶಿವಾಜಿನಗರ ಶಾಸಕ ರೋಷನ್ ಬೇಗ್​ ಅವರ ಹೇಳಿಕೆಗೆ ದಿನೇಶ್​ ಗುಂಡೂರಾವ್​ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಎಕ್ಸಿಟ್ ಪೋಲ್ ನೋಡಿ ರೋಷನ್ ಬೇಗ್ ಮಾತಾಡ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಅಂದ್ರೆ ನೇರವಾಗಿ ಹೇಳಲಿ. ಈ ರೀತಿಯಾಗಿ ಬಹಿರಂಗವಾಗಿ ಮಾತನಾಡಿದ್ದು ಸರಿಯಲ್ಲ. ರೋಷನ್ ಆತುರಕ್ಕೆ ಏನು ಹೇಳಬೇಕು ಎಂದು ನನಗೆ ಗೊತ್ತಾಗ್ತಿಲ್ಲ. ಪಕ್ಷದ ಹಿರಿಯರಂತೆ ನಾನೂ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ” ಅಂತ ಹೇಳಿದ್ದಾರೆ.

ಅಗತ್ಯ ಬಿದ್ದಲ್ಲಿ ಬಿಜೆಪಿ ಜೊತೆ ಕೈ ಜೋಡಿಸೋಕೆ ಸಿದ್ಧ ಅಂತ ರೋಷನ್ ಬೇಗ್ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಹೀನಾಯ ಸ್ಥಿತಿಗೆ ತಲುಪಲು ದಿನೇಶ್​ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರೇ ಕಾರಣ ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES