Sunday, December 22, 2024

ಮಂತ್ರಿ ಸ್ಥಾನ ಸಿಗದಿರೋದಕ್ಕೆ ಸಿದ್ದರಾಮಯ್ಯ ಸರಿ ಇಲ್ಲವೇ: ಜಮೀರ್ ಅಹ್ಮದ್

ಬೆಂಗಳೂರು: ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದಾಗ ಎಲ್ಲವೂ ಸರಿ ಇತ್ತು. ಈಗ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಸಿದ್ದರಾಮಯ್ಯ ಸರಿ ಇಲ್ಲವೇ? ಅಂತ ಸಚಿವ ಜಮೀರ್ ಅಹ್ಮದ್​ ಪ್ರಶ್ನಿಸಿದ್ದಾರೆ.

ಶಾಸಕ ರೋಷನ್ ಬೇಗ್​ ಹೇಳಿಕೆಗೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಎಂಪಿ ಟಿಕೆಟ್‌ ಸಿಕ್ಕಿಲ್ಲ ಅಂತಾ ಪಕ್ಷ ಸರಿ ಇಲ್ಲ ಅನ್ನೋದು ತಪ್ಪು. ರೋಷನ್ ಬೇಗ್ ನೀಡುತ್ತಿರುವ ಹೇಳಿಕೆಗಳು ಸರಿಯಿಲ್ಲ. ಬಿಜೆಪಿಗೆ ಹೋಗೋದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಮುಂದಿನ 2 ವರ್ಷಗಳ ಕಾಲ ಮಂತ್ರಿಯಾಗಿರುತ್ತೀನಿ. ನಂತರದ 2 ವರ್ಷ ಹ್ಯಾರಿಸ್ ಮಂತ್ರಿಯಾಗಿರುತ್ತಾರೆ” ಅಂತ ಹೇಳಿದ್ರು.

ಅಗತ್ಯವಿದ್ದಲ್ಲಿ ಬಿಜೆಪಿ ಜೊತೆ ಕೈ ಜೋಡಿಸೋಕೆ ಸಿದ್ಧವಿರೋದಾಗಿ ಶಿವಾಜಿನಗರ ಕಾಂಗ್ರೆಸ್​ ಶಾಸಕ ರೋಷನ್ ಬೇಗ್ ನೀಡಿರೋ ಹೇಳಿಕೆ ದೋಸ್ತಿಯಲ್ಲಿ ತಳಮಳ ಉಂಟು ಮಾಡಿದೆ.

RELATED ARTICLES

Related Articles

TRENDING ARTICLES