Thursday, January 23, 2025

ಚಿಕ್ಕನಗೌಡರ್, ಅವಿನಾಶ್ ಜಾಧವ್ ಹಕ್ಕು ಚಲಾವಣೆ

ಬೆಂಗಳೂರು: ರಾಜ್ಯದ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಲ್ಲಿ ಉಪಚುನಾವನೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಮತ ಚಲಾಯಿಸಿದ್ದಾರೆ. ಅದರಗುಂಚಿಯ ಮತಗಟ್ಟೆ ಸಂಖ್ಯೆ 65ಕ್ಕೆ ಬಂದ ಚಿಕ್ಕನಗೌಡರ್​ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾವಣೆ ಮಾಡಿದ್ದಾರೆ.

ಚಿಂಚೋಳಿ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮತದಾನ ಮಾಡಿದ್ದಾರೆ. ಸ್ವಗ್ರಾಮ ಬೆಡಸೂರು ತಾಂಡಾದಲ್ಲಿ ಹಕ್ಕು ಚಲಾವಣೆ ಮಾಡಿದ್ದು, ತಂದೆ ಉಮೇಶ್ ಜಾಧವ್, ತಾಯಿ ಗಾಯತ್ರಿ ಅವರೂ ಮತದಾನ ಮಾಡಿದ್ದಾರೆ. ಇದಕ್ಕೂ ಮುನ್ನ ಅವಿನಾಶ್ ಜಾಧವ್ ದೇಗುಲಯಾತ್ರೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಶೆರಿ ಬಡಾ ತಾಂಡಾದಲ್ಲಿನ ಮತಗಟ್ಟೆ ಸಂಖ್ಯೆ 165ರಲ್ಲಿ ಮತ ಚಲಾಯಿಸಿದ್ದಾರೆ.

RELATED ARTICLES

Related Articles

TRENDING ARTICLES