Thursday, January 23, 2025

ಚಿಂಚೋಳಿಯಲ್ಲಿ ಅವಿನಾಶ್ ದೇಗುಲಯಾತ್ರೆ

ಕಲಬುರ್ಗಿ: ಚಿಂಚೋಳಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮತದಾನಕ್ಕೂ ಮುನ್ನ ದೇಗುಲಯಾತ್ರೆ ನಡೆಸಿದ್ದಾರೆ. ಚಿಂಚೋಳಿಯ ರೇವಗಿ ಗ್ರಾಮದಲ್ಲಿರುವ ರೇವಣಸಿದ್ದೆಶ್ವರ ದೇವಸ್ಥಾನಕ್ಕೆ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಆಗಮಿಸಿ ವಿಷೇಶ ಪೂಜೆ ಸಲ್ಲಿಸಿದ್ದಾರೆ. ಪೂಜೆ ನಂತರ ಬೆಡಸುರ ಗ್ರಾಮದಲ್ಲಿ ಅವಿನಾಶ್ ಜಾಧವ್ ಮತ ಚಲಾಯಿಸಲಿದ್ದಾರೆ.

ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಕುಂದಗೋಳದಲ್ಲಿ ಕುಸುಮ ಶಿವಳ್ಳಿ ಗೆಲುವಿಗಾಗಿ ವಿಶೇಷ ಪೂಜೆ ನಡೆದಿದೆ. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮವ್ವ ಯರಗುಪ್ಪಿ ಗ್ರಾಮದ ಮತಗಟ್ಟೆ ಸಂಖ್ಯೆ 25 ರಲ್ಲಿ ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ. ಮತಗಟ್ಟೆಯಲ್ಲಿ ವಿಭೂತಿ ಕುಂಕುಮ ಹಚ್ಚಿ, ತೆಂಗಿನಕಾಯಿ ಒಡೆಯಲಾಗಿದ್ದು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮತಪೆಟ್ಟಿಗೆಗೆ ಆರತಿ ಬೆಳಗಿದ್ದಾರೆ.

RELATED ARTICLES

Related Articles

TRENDING ARTICLES